fbpx
ಸಮಾಚಾರ

ಕನ್ನಡತಿ ರಶ್ಮಿಕಾ ಮಂದಣ್ಣರನ್ನು ಮೆಚ್ಚಿದ ಬಾಲಿವುಡ್ ಸ್ಟಾರ್ ಹೃತಿಕ್ ರೋಷನ್!

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ. ಕಿರಿಕ್ ಪಾರ್ಟಿ ಚಿತ್ರದ ಯಶಸ್ಸಿನ ನಂತರ ಹಿಂತಿರುಗಿ ನೋಡದ ಮಟ್ಟಿಗೆ ಯಶಸ್ಸಿನ ಪಯಣದತ್ತ ಸಾಗಿದ ರಶ್ಮಿಕಾ ಕನ್ನಡವೂ ಸೇರಿದಂತೆ ತೆಲುಗು, ತಮಿಳು ರಂಗದಲ್ಲಿ ಕಡಿಮೆ ಅವಧಿಯಲ್ಲಿಯೇ ಬೇಡಿಕೆ ಸೃಷ್ಟಿಸಿಕೊಂಡವರು. ಕನ್ನಡವೂ ಸೇರಿದಂತೆ ಕಾಲಿವುಡ್ಡು, ಟಾಲಿವುಡ್ಡುಗಳಲ್ಲೂ ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.

Sweet. Thank you so much Rashmika & Nithiin. Best wishes for #Bheeshma! Love you guys 🙂 https://t.co/twzubWSuWQ— Hrithik Roshan (@iHrithik) December 28, 2019

ಈಗ ರಶ್ಮಿಕಾ ಬಗ್ಗೆ ಬಾಲಿವುಡ್​ನ ಹ್ಯಾಂಡ್​ಸಮ್ ನಟ ಹೃತಿಕ್ ರೋಷನ್ ಮಾತನಾಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಇತ್ತೀಚೆಗೆ ಬಾಲಿವುಡ್​ನಲ್ಲಿ ತೆರೆಕಂಡ ‘ವಾರ್’ ಸಿನಿಮಾ! ‘ಭೀಷ್ಮ’ ಸಿನಿಮಾದ ಶೂಟಿಂಗ್​ಗಾಗಿ ರಶ್ಮಿಕಾ ಮಂದಣ್ಣ ಹಾಗೂ ನಿತೀನ್​ ಇಟಲಿಗೆ ತೆರಳಿದ್ದಾರೆ. ಈ ವೇಳೆ ಹಿಂದಿಯ ಸೂಪರ್​ ಹಿಟ್ ಸಿನಿಮಾ ‘ವಾರ್’ನ ‘ಗುಂಗ್ರೂ…’ ಹಾಡಿಗೆ ಈ ಜೋಡಿ ಡಾನ್ಸ್​ ಮಾಡಿದೆ. ಈ ವಿಡಿಯೋವನ್ನು ರಶ್ಮಿಕಾ ಮಂದಣ್ಣ ಟ್ವಿಟ್ಟರ್​ನಲ್ಲಿ ಅಪ್​ಲೋಡ್​ ಮಾಡಿದ್ದಾರೆ.

Thankyou so much for the wishes sir means a lot ♥😁
And I hope we get to meet you someday and do the sequence with you sir. That’ll be so damn cool!💃🏻✨ https://t.co/qEgp9yr8gp— Rashmika Mandanna (@iamRashmika) December 28, 2019

ಹೃತಿಕ್ ಶೈಲಿಯಲ್ಲಿಯೇ ನಿತಿನ್ ಮತ್ತು ರಶ್ಮಿಕಾ ಕುಣಿದಿದ್ದಾರೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಅದನ್ನು ನೋಡಿದ ಹೃತಿಕ್, ‘ಸ್ವೀಟ್.. ಚೆನ್ನಾಗಿದೆ. ತುಂಬ ಧನ್ಯವಾದ ರಶ್ಮಿಕಾ ಮತ್ತು ನಿತಿನ್. ಭೀಷ್ಮ ತಂಡಕ್ಕೆ ಆಲ್ ದಿ ಬೆಸ್ಟ್. ಲವ್ ಯೂ ಗೈಸ್’ ಎಂದು ಕಮೆಂಟಿಸಿದ್ದಾರೆ. ಅವರ ಕಮೆಂಟ್​ಗೆ ಪ್ರತಿಕ್ರಿಯಿಸಿರುವ ರಶ್ಮಿಕಾ, ‘ಮುಂದೊಂದಿನ ನಾವು ಭೇಟಿಯಾದಾಗ ಇದೇ ಸೀಕ್ವೆನ್ಸ್​ಗೆ ಹೆಜ್ಜೆ ಹಾಕೋಣ ಸರ್..’ ಎಂದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top