fbpx
ಸಮಾಚಾರ

ಡಿಡಿಸಿಎ ಸಭೆಯಲ್ಲಿ ಮಾರಾಮಾರಿ: ಗಂಭೀರ್ ಆಕ್ರೋಶ, ಆಜೀವ ನಿಷೇಧಕ್ಕೆ ಆಗ್ರಹ!

ದಿಲ್ಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾರಿ ಮಾರಾಮಾರಿ ನಡೆದಿದೆ. ಸದಸ್ಯರು ಬಹಿರಂಗವಾಗಿಯೇ ಕೈ ಕೈ ಮಿಲಾಯಿಸುವಷ್ಟು ಹದೆಗೆಟ್ಟ ಪರಿಸ್ಥಿತಿಗೆ ಡಿಡಿಸಿಎ ತಲುಪಿರುವುದರಿಂದ ಆದಷ್ಟು ಬೇಗನೇ ಸಂಸ್ಥೆಯನ್ನು ವಿಸರ್ಜಿಸುವಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಸಂಸದ ಗೌತಮ್ ಗಂಭೀರ್, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಒತ್ತಾಯಿಸಿದ್ದಾರೆ.

ದೆಹಲಿಯಲ್ಲಿ ನಡೆದ ದೆಹಲಿ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ವಾರ್ಷಿಕ ಸಾಮಾನ್ಯಸಭೆ ಸದಸ್ಯರ ತೋಳ್ಬಲ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಆಂತರಿಕ ಬೇಗುದಿಯಿಂದ ಕುದಿಯುತ್ತಿದ್ದ ಸದಸ್ಯರು ಇದೀಗ ಬಹಿರಂಗವಾಗಿಯೇ ಕೈಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿದ್ದು, ನೋಡ ನೋಡುತ್ತಲೇ ಒಬ್ಬರ ಮೇಲೊಬ್ಬರು ಕೈ ಮಾಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

DDCA GOES “ALL OUT”…AND DDCA IS ALL OUT FOR A SHAMEFUL DUCK. Look, how handful of crooks are making mockery of an institution. I’d urge @BCCI @SGanguly99 @JayShah to dissolve @delhi_cricket immediately. Surely, sanctions or even a life ban for those involved. pic.twitter.com/yg0Z1kfux9 — Gautam Gambhir (@GautamGambhir) December 29, 2019

ಡಿಡಿಸಿಎ ನಲ್ಲಿನ ಆಂತರಿಕ ಜಗಳ ಇದೀಗ ಬೀದಿಗೆ ಬಿದ್ದಿದ್ದು, ಸದಸ್ಯರು ಬಹಿರಂಗವಾಗಿಯೇ ಹೊಡೆದಾಡಿಕೊಳ್ಳುವ ಮೂಲಕ ಈ ಹಿಂದೆಂದಿಗಿಂತಲೂ ತೀರಾ ಕೆಳಮಟ್ಟಕ್ಕಿಳಿದಿದ್ದಾರೆ. ಹೀಗಾಗಿ ಕೂಡಲೇ ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ಕೂಡಲೇ ಮಧ್ಯ ಪ್ರವೇಶಿಸಬೇಕು. ಅಲ್ಲದೆ ಇಡೀ ಡಿಡಿಸಿಎ ಆಡಳಿತ ಮಂಡಳಿಯನ್ನು ವಜಾಗೊಳಿಸಬೇಕು ಮತ್ತು ಮಾರಾಮಾರಿಯಲ್ಲಿ ಪಾಲ್ಗೊಂಡ ಸದಸ್ಯರ ಮೇಲೆ ಆ ಜೀವ ನಿಷೇಧ ಹೇರಬೇಕು ಎಂದು ಗಂಭೀರ್ ಆಗ್ರಹಿಸಿದ್ದಾರೆ. ಸದಸ್ಯರ ವರ್ತನೆಯಿಂದ ಕ್ರಿಕೆಟ್ ಗೆ ಅಪಮಾನವಾಗಿದೆ ಎಂದೂ ಗಂಭೀರ್ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top