fbpx
ಸಮಾಚಾರ

“ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ಸ್ಪರ್ಧಿಸುವವರಿಗೆ 5 ಕೋಟಿ ಕೊಡುತ್ತೇನೆ” ರಮೇಶ್​ ಜಾರಕಿಹೊಳಿ ಆಫರ್​​

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸೋಲಿಸಲು ಬಿಜೆಪಿಯಿಂದ ಸ್ಪರ್ಧಿಸುವ ಮರಾಠಾ ಸಮುದಾಯದ ಅಭ್ಯರ್ಥಿ ಗೆಲುವಿಗಾಗಿ ವೈಯಕ್ತಿಕವಾಗಿ 5 ಕೋಟಿ ರೂ. ಖರ್ಚು ಮಾಡುತ್ತೇನೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. “ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕರ ಬಗ್ಗೆ ಮಾತನಾಡುವುದು ಬೇಡ. ಆ ಶಾಸಕರು ಗೆಲ್ಲಲು ಕಾರಣ ನಾನು. ಗೆಲ್ಲಿಸಿದ್ದು ನನ್ನ ತಪ್ಪು. ಒಳ್ಳೆಯ ಸಂಸ್ಕೃತಿ ಹೆಣ್ಣುಮಗಳು ಎಂದು ಗೆಲ್ಲಿಸಿದ್ದೆ. ನಾನು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ಕ್ಷಮೆ ಕೇಳುತ್ತೇನೆ,” ಎಂದರು.

“ಮುಂದಿನ ಚುನಾವಣೆಯಲ್ಲಿ ಕುಕ್ಕರ್, ಹಣದ ಆಮಿಷವೊಡ್ಡಿದವರಿಗೆ ಜನರು ಮತ ಹಾಕಬಾರದು. ಈ ಕ್ಷೇತ್ರ ಮರಾಠಾ ಸಮುದಾಯದ ಜನರ ಹಕ್ಕು. ಮರಾಠಿಗರು ಒಂದಾದರೆ ಇಲ್ಲಿ ಯಾವ ಶಕ್ತಿಯೂ ಕೆಲಸ ಮಾಡದು. ಮರಾಠರು ಆತ್ಮಾವಲೋಕನ ಮಾಡಿಕೊಳ್ಳಲಿ. ಮರಾಠ ಮುಖಂಡರೆಲ್ಲರೂ ಒಂದಾಗಿ ಮುಂಬರುವ ಚುನಾವಣೆಗೆ ನಿಲ್ಲಿ. ನಾನು ಎಲೆಕ್ಷನ್ ಫಂಡ್‌ಗೆ 5 ಕೋಟಿ‌ ಕೊಡ್ತೀನಿ. ಗ್ರಾಮೀಣ ಭಾಗದ ಮರಾಠರೆಲ್ಲರೂ ಒಂದಾಗಬೇಕು. ಉಳಿದ ಸಮುದಾಯದ ಜವಾಬ್ದಾರಿ ನನ್ನದು ಎಂದು ಹೇಳಿದರು” ಎಂದು ಹೇಳಿದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top