fbpx
ಸಮಾಚಾರ

ಬರೋಬ್ಬರಿ 1.25 ಕೋಟಿ ಮೌಲ್ಯದ ಹಾವು ರಕ್ಷಣೆ – ಐವರು ಅಪ್ರಾಪ್ತ!

ಬರೋಬ್ಬರಿ 1.25 ಕೋಟಿ ರೂ. ಬೆಲೆ ಬಾಳುವ ರೆಡ್ ಸ್ಯಾಂಡ್ ಬೋವಾ ಹಾವನ್ನು ರಕ್ಷಿಸಿ, ಅದನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ಅಪ್ರಾಪ್ತರು ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅವಸಾನದಂಚಿನಲ್ಲಿರುವ ಸಂತತಿಯ ಹಾವು ಇದಾಗಿದ್ದು, ಐವರು ಇದನ್ನು ನರಸಿಂಘಗಢದಲ್ಲಿ ಭಾನುವಾರ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಇದರ ಮೌಲ್ಯ ಅಂದಾಜು 1.25 ಕೋಟಿ ಎಂದು ಹೇಳಲಾಗುತ್ತಿದೆ. ಬಂಧಿತ ಐವರು ಆರೋಪಿಗಳ ಪೈಕಿ ಮೂವರು ಅಪ್ರಾಪ್ತರು.

ನರಸಿಂಹಘಡ ಠಾಣೆಯ ಪೊಲೀಸ್ ಅಧಿಕಾರಿ ಕೈಲಾಶ್ ಭಾರದ್ವಾಜ್ ಘಟನೆ ಸಂಬಂಧ ಮಾಹಿತಿ ನೀಡುತ್ತಾ ‘ನಾವು ಭಾನುವಾರದಂದು ಎರಡು ತಲೆಯ ಹಾವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಐವರನ್ನು ಬಂಧಿಸಿದ್ದೇವೆ. ಅಲ್ಲದೇ ಅವರ ವಶದಲ್ಲಿದ್ದ 1.25 ಕೋಟಿ ಮೌಲ್ಯದ ಎರಡು ತಲೆ ಹಾವನ್ನೂ(Red Sand Boa Snake) ವಶಪಡಿಸಿಕೊಂಡಿದ್ದೇವೆ’ ಎಂದಿದ್ದಾರೆ.

ಈ ಹಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದ್ದು, ಕೋಟಿಗಟ್ಟಲೆ ಹಣ ಕೊಟ್ಟು ಈ ಹಾವನ್ನು ಜನ ಖರೀದಿ ಮಾಡುತ್ತಾರೆ. ಬೋವಾ ಹಾವು ವಿಷರಹಿತವಾಗಿದ್ದು, ಇದನ್ನು ಹಲವು ಔಷಧಿಗಳಿಗೆ, ಸೌಂದರ್ಯವರ್ಧಕ ಕ್ರೀಮ್‍ಗಳಲ್ಲಿ ಹಾಗೂ ಮಾಟ ಮಂತ್ರಕ್ಕೆ ಉಪಯೋಗಿಸಲಾಗುತ್ತದೆ. ಅಲ್ಲದೆ ಈ ಹಾವನ್ನು ಮನೆಯಲ್ಲಿ ಸಾಕಿದರೆ ಲಕ್ ಒಲಿದು ಬರುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ಈ ಹಾವಿಗೆ ಭಾರೀ ಬೇಡಿಕೆ ಇದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top