fbpx
ಸಮಾಚಾರ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮನೀಶ್ ಪಾಂಡೆಗೆ ವಿಶೇಷವಾಗಿ ಶುಭಕೋರಿದ ವಿರಾಟ್ ಕೊಹ್ಲಿ!

ಕ್ರಿಕೆಟಿಗ ಮನೀಶ್ ಪಾಂಡೆ ಸೋಮವಾರ ತುಳು ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದಾರೆ. ಮದುವೆಯ ಆಚರಣೆ ಎರಡು ದಿನಗಳ ಕಾಲ ನಡೆಯಲಿದ್ದು, ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯ ಸ್ನೇಹಿತರು ಭಾಗಿಯಾಗಿದ್ದಾರೆ.

Congratulations Pandey ji. Wish you both a lifetime of beautiful moments and happiness. God bless you both 😇🙏@im_manishpandey — Virat Kohli (@imVkohli) December 3, 2019

ಡಿಸೆಂಬರ್ 2 ರಂದು ಮುಂಬೈನಲ್ಲಿ ವಿವಾಹವಾದ ಮನೀಶ್ ಪಾಂಡೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಭಹಾರೈಸಿದ್ದಾರೆ. ಮನೀಶ್ ಪಾಂಡೆಗೆ ವಿವಾಹಕ್ಕೆ ಟ್ವಿಟರ್ ಮೂಲಕ ವಿರಾಟ್ ಕೊಹ್ಲಿ ಶುಭಕೋರಿದ್ದಾರೆ. “ಅಭಿನಂದನೆಗಳು ಪಾಂಡೆಜೀ. ನಿಮ್ಮಿಬ್ಬರಿಗೂ ಜೀವಮಾನದ ಸುಂದರ ಕ್ಷಣಗಳು ಮತ್ತು ಸಂತೋಷದ ಶುಭಾಶಯಗಳು. ದೇವರು ನಿಮ್ಮಿಬ್ಬರನ್ನು ಆಶೀರ್ವದಿಸಲಿ” ಎಂದು ವಿರಾಟ್ ಟ್ವೀಟ್ ಮಾಡಿದ್ದಾರೆ.

ಇನ್ನು 30 ವರ್ಷ ವಯಸ್ಸಿನ ಮನೀಶ್ ಹಾಗೂ ಆಶ್ರಿತಾ ಅನೇಕ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ಹಿಂದೆ ಮನೀಶ್ ಪಾಂಡೆ ಹಾಗೂ ಆಶ್ರಿತಾ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಇವರಿಬ್ಬರು ಮದುವೆಯಾಗುವ ಮೂಲಕ ಗಾಸಿಪ್‍ಗಳಿಗೆ ತೆರೆ ಎಳೆದಿದ್ದಾರೆ.

ಆಶ್ರಿತಾ ಶೆಟ್ಟಿ ಯಾರು?
ಮುಂಬೈ ಮೂಲದ ನಟಿ, ರೂಪದರ್ಶಿ ಆಗಿರುವ ಆಶ್ರಿತಾ ಶೆಟ್ಟಿ 2012ರಲ್ಲಿ ತೆಲಿಕೆದ ಬೊಳ್ಳಿ ತುಳ್ಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲರಿಸಿದ್ದರು. ಅಲ್ಲಿಂದ ಬಳಿಕ ಟಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿರುವ ಆಶ್ರಿತಾ ಶೆಟ್ಟಿ ನಾಲ್ಕು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯಂ ಎನ್‌ಎಚ್ 4 (2013), ಒರು ಕನ್ನಿಯುಂ ಮೂನು ಕಲವಾನಿಕಲುಂ (2014) ಹಾಗೂ ಇಂದ್ರಜಿತ್ (2017) ಚಿತ್ರಗಳಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top