fbpx
ಸಮಾಚಾರ

“ಗಲ್ಲಿಗೇರಿಸಲು ಆಗಿಲ್ಲವೆಂದ್ರೆ ಅತ್ಯಾಚಾರಕ್ಕೆ ಬಳಸುವ ಅಂಗವನ್ನೇ ಕತ್ತರಿಸಿ” ರಾಖಿ ಸಾವಂತ್

ತೆಲಂಗಾಣದಲ್ಲಿ ನಡೆದ ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣ ಇಡೀ ದೇಶವನ್ನೆ ಬೆಚ್ಚಿಬೀಳಿಸಿದೆ. ಪಶು ವೈದ್ಯೆ ಹತ್ಯೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಜೊತೆಗೆ ದಕ್ಷಿಣ ಭಾರತೀಯ ಚಿತ್ರರಂಗದ ಕಲಾವಿದರು ಕೂಡ ಪ್ರಿಯಾಂಕಾ ರೆಡ್ಡಿ ಹತ್ಯೆ ವಿರದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ಪಶುವೈದ್ಯೆಯ ಹತ್ಯೆಯ ವಿರುದ್ಧ ನಟಿ ಅನುಷ್ಕಾ ಶೆಟ್ಟಿ ಸೇರಿದಂತೆ ದಕ್ಷಿಣ ಭಾರತದ ಕಲಾವಿದರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಾಲಿವುಡ್ ನಟಿ ರಾಖಿ ಸಾವಂತ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ವಿಡಿಯೋವೊಂದನ್ನು ಹಾಕಿದ್ದು ಅತ್ಯಾಚಾರಿಗಳಿಗೆ ಯಾವ ರೀತಿ ಶಿಕ್ಷೆ ನೀಡಬೇಕು ಎಂದು ವಿವರಿಸಿದ್ದಾರೆ. ಅತ್ಯಾಚಾರ ಮಾಡುವವರನ್ನು ಗಲ್ಲಿಗೇರಿಸಿ.. ಇಲ್ಲಾಂದ್ರೆ, ಗಲ್ಫ್ ದೇಶಗಳಲ್ಲಿ ಶಿಕ್ಷೆ ಕೊಡುವ ಹಾಗೆ ನಪುಂಸಕನನ್ನಾಗಿ ಮಾಡಿ. ರೇಪಿಸ್ಟ್ ಗಳ ಮರ್ಮಾಂಗ ಕತ್ತರಿಸಿ” ಎಂದು ವಿಡಿಯೋದಲ್ಲಿ ರಾಖಿ ಸಾವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಅತ್ಯಾಚಾರ ಆರೋಪಿಗಳಿಗೆ ಗಲ್ಲಿಗೆ ಏರಿಸಬೇಕೆಂದು ನಾನು ಈ ದೇಶದ ಕಾನೂನಿಗೆ ಹೇಳಲು ಬಯಸುತ್ತೇನೆ. ಗಲ್ಲಿಗೇರಿಸಲು ಆಗಲಿಲ್ಲ ಎಂದರೆ ಅವರನ್ನು ನಪುಂಸಕನನ್ನಾಗಿ ಮಾಡಬೇಕು. ಇದರಿಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದರಿಂದ ಏನು ಆಗುತ್ತೆ ಎಂಬುದು ತಿಳಿಯುತ್ತದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಇದರಿಂದ ಭಾರತದ ಕಾನೂನು ಎಷ್ಟು ಕಠಿಣವಾಗಿದೆ ಎಂಬುದನ್ನು ಅವರು ತಿಳಿದುಕೊಳ್ಳಬೇಕು” ಎಂದು ರಾಖಿ ಹೇಳಿದ್ದಾರೆ.

ಅಂದಹಾಗೆ ಹೈದರಾಬಾದ್​ನಲ್ಲಿ ಕಳೆದ ವಾರ 26 ವರ್ಷದ ಪಶುವೈದ್ಯೆಯೊಬ್ಬರ ಮೇಲೆ ನಾಲ್ಕು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆಗೈದಿದ್ದರು. ಮಹಿಳೆಯ ಟಯರ್ ಪಂಕ್ಚರ್ ಆದಾಗ ಸಹಾಯ ಮಾಡುವ ನೆಪದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದರು. ಈ ಘಟನೆ ಸಂಬಂಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top