fbpx
ಸಮಾಚಾರ

ಡಿ.1ಕ್ಕೆ ಟ್ರೋಫಿ ಗೆಲುವು, ಡಿ.2ಕ್ಕೆ ಮದ್ವೆ, ಡಿ.4ಕ್ಕೆ ಟೀಂ ಇಂಡಿಯಾ ಸೇರ್ಪಡೆ; ಇದು ಮನೀಶ್ ಪಾಂಡೆ ಪಯಣ!

ಕ್ರಿಕೆಟಿಗ ಮನೀಶ್ ಪಾಂಡೆ ಸೋಮವಾರ ಮಂಗಳೂರು ಮೂಲದ, ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮನೀಶ್ ಪಾಂಡೆ ಅವರು ತುಳು ಹಾಗೂ ದಕ್ಷಿಣ ಭಾರತದ ನಟಿಯಾಗಿರುವ ಆಶ್ರಿತಾ ಶೆಟ್ಟಿ ಅವರ ಜೊತೆ ವಿವಾಹವಾಗಿದ್ದಾರೆ. ಹೊಸ ಮಧುಮಗ ಮನೀಶ್ ಪಾಂಡೆ ಒಂದು ದಿನವೂ ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ಮದುವೆಯಾದ ಎರಡೇ ದಿನಕ್ಕೆ ಟೀಮ್ ಇಂಡಿಯಾವನ್ನು ಕೂಡಿಕೊಂಡಿದ್ದಾರೆ. ಪಾಂಡೆ ಬ್ಯುಸಿ ಶೆಡ್ಯೂಲ್ ಕುರಿತು ಇಲ್ಲದೆ ಮಾಹಿತಿ.

ಕರ್ನಾಟಕ ತಂಡದ ನಾಯಕನಾಗಿರುವ ಮನೀಶ್ ಪಾಂಡೆ ಡಿಸೆಂಬರ್ 1ರಂದು ಸೈಯ್ಯದ್ ಮುಷ್ತಾಕ್ ಆಲಿ ಟೂರ್ನಿ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಮುನ್ನಡೆಸಿ ಗೆಲುವು ತಂದುಕೊಟ್ಟಿದ್ದರು. ತಡರಾತ್ರಿ ಮುಂಬೈಗೆ ತೆರಳಿದ ಪಾಂಡೆ ಮದುವೆಗೂ ಕೆಲ ಗಂಟೆಗಳ ಮುನ್ನ ಮಂಟಪ ತಲಪುದಿದ್ದರು. ಅಂದರೆ ಡಿಸೆಂಬರ್.2 ರಂದು ಮುಂಬೈನಲ್ಲಿ ಮದುವೆಯಾಗಿದ್ದರು.

ಆಶ್ರಿತಾ ಶೆಟ್ಟಿ ಮದುವೆಯಾದ ಮನೀಶ್ ಪಾಂಡೆ, ಡಿಸೆಂಬರ್ 3 ರಂದು ವಿಶ್ರಾಂತಿ ಪಡೆದು, ಡಿಸೆಂಬರ್ 4 ರಂದು ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಡಿಸೆಂಬರ್ 6 ರಿಂದ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಆರಂಭವಾಗಲಿದೆ. ಹೈದರಾಬಾದ್‌ನಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದ್ದು, ಇಂದು (ಡಿ.4) ಪಾಂಡೆ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top