fbpx
ಸಮಾಚಾರ

ಸಲ್ಮಾನ್ ಖಾನ್ ಚಿತ್ರಕ್ಕೆ ನಾಯಕಿಯಾದ ಕರ್ನಾಟಕದ ಹುಡುಗಿ!

ನಟ ಸಲ್ಮಾನ್‌ ಖಾನ್ ಅವರ ಹೊಸ ಸಿನಿಮಾಗೆ ಕರ್ನಾಟಕದ ಚೆಲುವೆಯೊಬ್ಬರು ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮುಂದಿನ ವರ್ಷ ಆರಂಭವಾಗಲಿರುವ ‘ಕಿಕ್2 ಚಿತ್ರಕ್ಕೆ ಸದ್ಯ ಭರ್ಜರಿ ಸಿದ್ದತೆಗಳು ನಡೆಯುತ್ತವೆ. ಇದೀಗ ಕನ್ನಡದವರೇ ಆದ ಪೂಜಾ ಹೆಗ್ಡೆ ಈಗ ಸಲ್ಮಾನ್ ಖಾನ್ ಸಿನಿಮಾಗೆ ನಾಯಕಿ ಆಗಿದ್ದಾರೆ. ‘ಕಿಕ್ 2’ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿ ಆಗಿದ್ದಾರೆ.

ನಿರ್ಮಾಪಕ ಸಾಜಿದ್ ನಾದಿಯದ್ವಾಲಾ ‘ಕಿಕ್‌ 2’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಈ ಹಿಂದೆ ಅವರೇ ನಿರ್ಮಿಸಿದ್ದ ‘ಹೌಸ್‌ಫುಲ್‌ 4’ನಲ್ಲಿ ಪೂಜಾ ನಟಿಸಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಲ್ ಮಾಡಿತ್ತು. ಅಷ್ಟೇ ಅಲ್ಲದೆ ಪೂಜಾ ಅವರ ಮೂರು ಕಾಲ್‌ಶೀಟ್‌ ಸಾಜಿದ್ ಬಳಿ ಇವೆಯಂತೆ. ಹಾಗಾಗಿ, ‘ಕಿಕ್‌ 2’ಗೂ ಪೂಜಾಗೆ ಮಣೆ ಹಾಕಿದ್ದಾರೆ ಎನ್ನಲಾಗಿದೆ.

ಸದ್ಯ ನಟ ಸಲ್ಮಾನ್‌ ಖಾನ್ ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ದಬಾಂಗ್ 3’ ಡಿ.20ರಂದು ಅದ್ದೂರಿಯಾಗಿ ಬಹುಭಾಷೆಗಳಲ್ಲಿ ತೆರೆಗೆ ಬರಲಿದೆ. ಅದರ ಜತೆಗೆ ಈಗಾಗಲೇ ‘ರಾಧೆ’ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಿದ್ಧಾರೆ ಸಲ್ಮಾನ್‌ ಖಾನ್‌. ಇದರ ಮಧ್ಯೆ ಹೊಸ ಸಿನಿಮಾಗೆ ಚಾಲನೆ ನೀಡಿದ್ದಾರೆ. 2015 ನಲ್ಲಿ ‘ಕಿಕ್’ ಸಿನಿಮಾ ಬಂದಿದ್ದು, ಅದರಲ್ಲಿ ಜಾಕ್ವಲೀನ್ ಫರ್ನಾಂಡೀಸ್ ನಾಯಕಿ ಆಗಿದ್ದರು. ಈ ಸಿನಿಮಾಗೆ ಪೂಜಾ ಜೋಡಿ ಆಗುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top