fbpx
ಸಮಾಚಾರ

ಟಿಕ್‌ಟಾಕ್‌ನಲ್ಲಿ ಸಕತ್ ಟ್ರೆಂಡ್ ಆಗ್ತಿದೆ ‘ಹೌದು ಹುಲಿಯಾ’: ವಿಡಿಯೋ

ಮಾಜಿ ಸಿಎಂ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆ ಕುಡುಕನೊಬ್ಬ ಹೇಳಿದ್ದ ‘ಹೌದು ಹುಲಿಯಾ’ ಡೈಲಾಗ್ ಇದೀಗ ಫುಲ್ ವೈರಲ್ ಆಗಿದೆ. ಸಿದ್ದರಾಮಯ್ಯ ಹಾಗೂ ಕುಡುಕನ ಧ್ವನಿ ಬಳಸಿದ ಡೈಲಾಗ್ ಟಿಕ್‌ಟಾಕ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ.

ನ. 30 ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರದಲ್ಲಿ ಜರುಗಿದ ಕಾಂಗ್ರೆಸ್ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಭಾಷಣ ಮಾಡುವ ವೇಳೆ ದೇಶಕ್ಕಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪ್ರಾಣಕೊಟ್ಟಿದ್ದರು ಎಂದು ಹೇಳಿದಾಗ ವೇದಿಕೆಯ ಮುಂಭಾಗದಲ್ಲೇ ಕುಳಿತಿದ್ದ ಕುಟುಕನೊಬ್ಬ ಸಿದ್ದು ಮಾತಿಗೆ `ಹೌದು ಹುಲಿಯಾ’ ಎಂದು ಹೇಳಿದ್ದನು.

ಇದರಿಂದ ಸಿಟ್ಟಾದ ಸಿದ್ದರಾಮಯ್ಯ, “ಏ ಯಾರೋ ಅವನು, ಕಳ್ಸೋ ಆಚೆ ಅವನ್ನಾ” ಎಂದು ಗರಂ ಆಗಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಕುಡುಕನನ್ನು ಹೊರಹಾಕಲು ಮುಂದಾದಾಗ, “ಸುಮ್ಮನೆ ಕೂತ್ಕೋಬೇಕು. ಇನ್ನೊಂದು ಸಲ ಈ ರೀತಿ ಮಾತಾಡಿದರೆ ಆಚೆ ಕಳುಹಿಸಿಬಿಡುತ್ತೇನೆ” ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದರು., ಸದ್ಯ ಟಿಕ್ ಟಾಕ್ ನಲ್ಲಿ ಇದು ಸಖತ್ ವೈರಲ್ ಆಗುತ್ತಿದೆ.

ಇದೀಗ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಟಿಕ್‌ಟಾಕ್‌ನಲ್ಲಿ ಉತ್ತರ ಕರ್ನಾಟಕದ ಯುವಕರು ಯಾವ ರೀತಿ ಟ್ರೋಲ್ ಮಾಡಿದ್ದಾರೆ. ಕುಡುಕನ ಡೈಲಾಗ್ ಅನ್ನು ಇದೀಗ ಟಿಕ್ ಟಾಕ್ ನಲ್ಲಿ ಯುವಕ-ಯುವತಿಯರು ಡಬ್ ಸ್ಮಾಶ್ ಮಾಡುತ್ತಿದ್ದು, ಸದ್ಯ ಈ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top