fbpx
ಸಮಾಚಾರ

ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಅನಾರೋಗ್ಯ: ಆಸ್ಪತ್ರೆಗೆ ದಾಖಲು

ಮಾಜಿ ಮುಖ್ಯಮಂತ್ರಿ‌ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯವುಂಟಾಗಿದೆ. ಹವಾಮಾನ ವೈಪರೀತ್ಯದಿಂದ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಸತತ ತೊಡಗಿಸಿಕೊಂಡಿದ್ದರಿಂದ ಜ್ವರ, ನೆಗಡಿ ಕೆಮ್ಮು ಉಂಟಾಗಿದೆ.

ತೀವ್ರ ಜ್ವರ, ಕೆಮ್ಮಿನಿಂದ ಬಳಲುತ್ತಿರುವ ಅವರು ಬುಧವಾರ ಬೆಳಗ್ಗೆ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯದೇವ ಆಸ್ಪತ್ರೆಯಲ್ಲಿ ಇಂದು ಕುಮಾರಸ್ವಾಮಿ ತಪಾಸಣೆಗೊಳಗಾದರು. ಸುಮಾರು ಅರ್ಧಗಂಟೆ ಕುಮಾರಸ್ವಾಮಿ ಅವರನ್ನು ಪರಿಶೀಲಿಸಿದ ವೈದ್ಯರು, ನಾಲ್ಕು ದಿನ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಕಳೆದ 14 ದಿನಗಳಿಂದ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ, ದಿನಕ್ಕೆ ಎರೆಡು ಕ್ಷೇತ್ರಗಳಂತೆ ಪ್ರಚಾರ ಮಾಡುತ್ತಿದ್ದರು. ಹವಾಮಾನ ವೈಪರಿತ್ಯ, ಚುನಾವಣಾ ಒತ್ತಡದಿಂದಾಗಿ ಅವರಿಗೆ ಜ್ವರ ಕಾಣಿಸಿಕೊಂಡಿದ್ದು, ಕೆಮ್ಮು ಕೂಡ ಇತ್ತು ಈಗ ಆಸ್ಪತ್ರೆಗೆ ದಾಖಲಿಸಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top