fbpx
ಸಮಾಚಾರ

ತಾಯಿಯನ್ನು ಟ್ರೋಲ್ ಮಾಡಿದವರ ವಿರುದ್ಧ ರೊಚ್ಚಿಗೆದ್ದ ರಾನು ಮಂಡಲ್ ಮಗಳು!

ಇತ್ತೀಚೆಗೆ ರಾನು ಮೊಂಡಲ್ ಅವರ ಮೇಕಪ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾನು ಮುಖಕ್ಕೆ ಅತಿಯಾಗಿ ಮೇಕಪ್ ಮಾಡಿರುವ ಫೋಟೋವನ್ನು ನೋಡಿ ನೆಟ್ಟಿಗರು ಮನಬಂದಂತೆ ಟ್ರೋಲ್ ಮಾಡಿದ್ದರು. ರೈಲು ನಿಲ್ದಾಣದಲ್ಲಿ ಹಾಡು ಹಾಡುವವರಿಗೆಲ್ಲಾ ಈ ರೀತಿ ಮಣೆ ಹಾಕಿದರೆ ಪರಿಸ್ಥಿತಿ ಹೀಗೆಯೇ ಇರುತ್ತದೆ ಎಂದು ಕೆಲವರು ಹೀಯಾಳಿಸಿ ಮಾತನಾಡುತ್ತಾ ರಾನು ಮೊಂಡಲ್‌ರ ತೇಜೋವಧೆ ಮಾಡಿದ್ದರು.

ಟ್ರೋಲ್ ಮಾಡಿದವರಿಗೆ ರಾನು ಮಂಡಾಲ್ ಪುತ್ರಿ ಎಲಿಜಬೆತ್ ಸಾಥಿ ರಾಯ್ ತಿರುಗುತ್ತರ ಕೊಟ್ಟಿದ್ದಾರೆ. ನನ್ನ ತಾಯಿಯ ಫೋಟೋವನ್ನು ಈ ರೀತಿ ವೈರಲ್ ಮಾಡುತ್ತಿರುವುದಕ್ಕೆ ಬೇಸರವಿದೆ. ಲೈಫಲ್ಲಿ ಬಹಳ ಕಷ್ಟಪಟ್ಟಿದ್ದಾರೆ. ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಾರೆ. ಈಗ ನಿಧಾನಕ್ಕೆ ಯಶಸ್ಸು ಸಿಗುತ್ತಿದೆ. ಈಗ ನನ್ನ ಅಮ್ಮನನ್ನು ಟ್ರೋಲ್ ಮಾಡುತ್ತಿರುವುದು ಬೇಸರ ತರಿಸಿದೆ’ ಎಂದು ಹೇಳಿದ್ದಾರೆ.

ಮೇಕಪ್‌ ಸಲೂನ್‌ನ ಉದ್ಘಾಟನೆ ನಂತರ ರಾನು ಮಂಡಲ್‌ ಅವರಿಂದ ರ್ಯಾಂಪ್‌ ವಾಕ್‌ ಮಾಡಿಸಿದ ಆಯೋಜಕರನ್ನೂ ಸಾತಿ ಖಂಡಿಸಿದ್ದಾರೆ. ‘ಗಾಯಕಿಯಾದ ನನ್ನ ತಾಯಿಯಿಂದ ಅಂಥದ್ದೊಂದು ರ್ಯಾಂಪ್‌ ವಾಕ್‌ ಮಾಡಿಸುವುದು ಅಗತ್ಯವಿತ್ತೇ? ಅವರು ಅದೇಕೆ ಹಾಗೆ ಮಾಡಬೇಕಿತ್ತು? ನನ್ನ ತಾಯಿ ಒಬ್ಬ ಗಾಯಕಿ. ಮಾಡೆಲ್‌ ಅಲ್ಲ. ಜನ ಆಕೆಯನ್ನು ಗೇಲಿ ಮಾಡುತ್ತಿದ್ದಾರೆ. ಇದು ನಿಜಕ್ಕೂ ತುಚ್ಚವಾದ ವರ್ತನೆ. ಜನ ಹೀಗೆಲ್ಲ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ನನ್ನಮ್ಮ ಶ್ರೀಮಂತ ಮನೆತನದಿಂದ ಬಂದವರಲ್ಲ. ಅತ್ಯಂತ ಬಡ ಕುಟುಂಬದಿಂದ ಬಂದವರು. ಆಕೆ ಈ ವರೆಗೆ ಚಂದವಾಗಿ ಸಿಂಗಾರ ಮಾಡಿಕೊಂಡಿಲ್ಲ. ಆಕೆ ರಸ್ತೆಯಲ್ಲಿ ಹಾಡುತ್ತಿದ್ದವರು, ಆಕಸ್ಮಿಕವಾಗಿ ಪ್ರಸಿದ್ಧಿ ಪಡೆದಿದ್ದಾರೆ ಅಷ್ಟೇ,’ ಎಂದಿದ್ದಾರೆ ರನು ಪುತ್ರಿ

“ನನ್ನ ತಾಯಿಯನ್ನು ಈ ರೀತಿ ಟ್ರೋಲ್ ಮಾಡಿರುವುದು ನೋಡಿ ನನಗೆ ತುಂಬಾ ದುಃಖವಾಗಿದೆ. ನನ್ನ ತಾಯಿಗೆ ಮೊದಲಿನಿಂದಲೂ ಆ್ಯಟಿಟ್ಯೂಡ್ ಸಮಸ್ಯೆ ಇದೆ. ಮೊದಲಿನಿಂದಲೂ ಅವರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟ ವ್ಯಕ್ತಿ ಯಶಸ್ಸು ಪಡೆದಾಗ ಜನರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಎಂಬುದು ತುಂಬಾ ದುಃಖದ ಸಂಗತಿ. ನನ್ನ ತಾಯಿ ವಿರುದ್ಧದ ಟ್ರೋಲ್‌ಗಳ ಹಿಂದೆ ಏನೋ ಉದ್ದೇಶ ಅಡಗಿದೆ. ಇತ್ತೀಚೆಗೆ ಮೈಕೈ ಮುಟ್ಟಿ ಸೆಲ್ಫಿ ಕೇಳಲು ಬಂದವರೊಬ್ಬರ ಮೇಲೆ ನನ್ನ ಅಮ್ಮ ರೇಗಿದ್ದರು. ಅವರೆಲ್ಲರೂ ಆಕೆಯನ್ನು ರೇಗಿಸುತ್ತಿದ್ದಾರೆ ಎಂದು ನನಗನಿಸುತ್ತದೆ..” ಎಂದು ಪ್ರತಿಕ್ರಿಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top