fbpx
ಸಮಾಚಾರ

“ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ” ಚಾಲೆಂಜಿಂಗ್ ಸ್ಟಾರ್ ದರ್ಶನ್!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ‘ಒಡೆಯ‘ ಸಿನಿಮಾದ ಟ್ರೈಲರ್​ ನೆನ್ನೆಯಷ್ಟೇ ಬಿಡುಗಡೆಯಾಗಿದೆ. ಮನೆಗೆ ದೊಡ್ಡ ಮಗನಾಗಿ ತನ್ನ ತಮ್ಮಂದಿರನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಡೆಯನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪ್ರೀತಿ, ಕುಟುಂಬ, ಎಮೋಷನಲ್, ಆ್ಯಕ್ಷನ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ.

ಅಷ್ಟೇ ಅಲ್ಲದೆ ಟ್ರೈಲರ್ ನಲ್ಲಿ ದರ್ಶನ ಹೇಳಿರುವ ಡೈಲಾಗ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. “ಅಧಿಕಾರ ಎಂಬುದು ಇವತ್ತು ಒಬ್ಬರ ಹತ್ತಿರ ಇದ್ದರೇ ನಾಳೆ ಇನ್ನೊಬ್ಬರ ಬಳಿ ಇರುತ್ತೆ. ಆದರೆ ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ” ಎಂಬ ಡೈಲಾಗ್ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ.

ಇನ್ನು ಇದೇ ತಿಂಗಳ 12ರಂದು ಈ ಸಿನಿಮಾ ರಿಲೀಸ್ ಆಗಲಿದ್ದು ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಐವರು ಸಹೋದರರ ಪ್ರೀತಿಯ ಅಣ್ಣನ ಕಥೆಯಾಗಿದೆ. ದರ್ಶನ್ ಅವರ ಪಾತ್ರದ ಹೆಸರು ಗಜೇಂದ್ರ. ತಮಿಳಿನಲ್ಲಿ ಅಜಿತ್ ನಿರ್ವಹಿಸಿದ್ದ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top