fbpx
ಸಮಾಚಾರ

ನಟಿ ರಚಿತಾ ಮನೆಯಲ್ಲಿ ಮದುವೆ ಸಂಭ್ರಮ: ನಿಶ್ಚಿತಾರ್ಥ ಮಾಡಿಕೊಂಡ ನಿತ್ಯ ರಾಮ್, ಹುಡುಗ ಯಾರು ಗೊತ್ತಾ?

ಇತ್ತೀಚೆಗೆ ಕಿರುತೆರೆ ಮತ್ತು ಬೆಳ್ಳಿತೆರೆ ನಟ-ನಟಿಯರು ಹಸೆಮಣೆ ಏರುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇತ್ತೀಚಿಗೆ ನಟ ರಿಷಿ, ನಟ ದ್ರುವ ಸರ್ಜಾ, ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಕಿರುತೆರೆ ಲೋಕದಲ್ಲಿ ‘ಕುಲವಧು’ ಧಾರಾವಾಹಿ ಖ್ಯಾತಿಯ ದೀಪಿಕಾ ಮತ್ತು ‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಇಶಿತಾವರ್ಷ ಮೊನ್ನೆಮೊನ್ನೆಯಷ್ಟೇ ವಿವಾಹವಾಗಿದ್ದರು. ಇದೀಗ ಇದೇ ಲಿಸ್ಟ್ ಗೆ ಸೇರಲು ಕಿರುತೆರೆ ನಟಿ ನಿತ್ಯ ರಾಮ್ ಸಜ್ಜಾಗಿದ್ದಾರೆ.

ನಿತ್ಯಾ ಮದುವೆ ಇದೇ ಡಿಸೆಂಬರ್ 5 ರಂದು ದೊಡ್ಡ ಉದ್ಯಮಿಯಾಗಿರೋ ಹುಡುಗನೊಂದಿಗೆ ಅದ್ಧೂರಿಯಾಗಿ ನಡೆಯಲಿದೆ. ನಿತ್ಯಾರನ್ನು ವರಿಸಲಿರುವ ಹುಡುಗ ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿದ್ದು, ಸಹೋದರಿಯ ಮದುವೆ ವಿಚಾರವಾಗಿ ರಚಿತಾ ತುಂಬಾ ಖುಷಿಯಾಗಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಸಪ್ತಪದಿ ತುಳಿಯಲು ದಿನಗಣನೆ ಶುರುವಾಗಿದೆ. ಇನ್ನೂ ಮೂರು ದಿನಗಳಲ್ಲಿ ನಿತ್ಯ ರಾಮ್ ವಿವಾಹ ಮಹೋತ್ಸವ ಜರುಗಲಿದೆ. ಹೀಗಿರುವಾಗಲೇ, ನಟಿ ನಿತ್ಯ ರಾಮ್ ನಿಶ್ಚಿತಾರ್ಥ ನೆರವೇರಿದೆ. ಆಸ್ಟ್ರೇಲಿಯಾದ ಉದ್ಯಮಿಯ ಕೈಬೆರಳಿಗೆ ನಿತ್ಯ ರಾಮ್ ಉಂಗುರ ತೊಡಿಸಿದ್ದಾರೆ.

. ನಿತ್ಯ ರಾಮ್ ಕೈಹಿಡಿಯುತ್ತಿರುವ ಹುಡುಗನ ಹೆಸರು ಏನು ಎಂಬುದು ತಿಳಿದುಬಂದಿಲ್ಲ. ಅವರು ಆಸ್ಟ್ರೇಲಿಯಾದಲ್ಲಿ ಬ್ಯುಸಿನೆಸ್ ಮಾಡುತ್ತಿದ್ದಾರೆ ಎಂಬ ವಿಚಾರ ಮಾತ್ರ ತಿಳಿದುಬಂದಿದೆ. ನಿಶ್ಚಿತಾರ್ಥ ಸಮಾರಂಭಕ್ಕೆ ಹಳದಿ ಬಣ್ಣದ ಸೀರೆಯಲ್ಲಿ ನಿತ್ಯ ರಾಮ್ ಕಂಗೊಳಿಸಿದರೆ, ಪೀಚ್ ಕಲರ್ ಕುರ್ತಾದಲ್ಲಿ ನಿತ್ಯ ರಾಮ್ ಭಾವಿ ಪತಿ ಮಿಂಚಿದರು. ಉಂಗುರ ಬದಲಾಯಿಸಿಕೊಂಡ ಫೋಟೋಗಳನ್ನ ನಿತ್ಯ ರಾಮ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ ‘ಬೆಂಕಿಯಲ್ಲಿ ಅರಳಿದ ಹೂವು’, ‘ಕರ್ಪೂರದ ಗೊಂಬೆ’, ‘ರಾಜಕುಮಾರಿ’, ‘ಎರಡು ಕನಸು’, ನಂದಿನಿ’ ಧಾರಾವಾಹಿಗಳಲ್ಲಿ ನಿತ್ಯ ರಾಮ್ ನಟಿಸಿದ್ದಾರೆ. ಕನ್ನಡದ ‘ಮುದ್ದು ಮನಸು’ ಸಿನಿಮಾದಲ್ಲೂ ನಿತ್ಯ ರಾಮ್ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top