fbpx
ಸಮಾಚಾರ

ತಮಿಳುನಾಡು ವಿರುದ್ಧ ರೋಚಕ ಜಯ: 2ನೇ ಬಾರಿ ಸೈಯದ್​ ಮುಷ್ತಾಕ್​ ಅಲಿ ಟ್ರೋಫಿ ಗೆದ್ದ ಕರ್ನಾಟಕ!

ಸೈಯದ್ ಮುಷ್ತಾಕ್ ಅಲಿ ಟಿ-20 ಟ್ರೋಫಿ, ಈ ಬಾರಿಯು ಕರ್ನಾಟಕದ ಪಾಲಾಗಿದೆ. ಅತ್ಯಂತ ರೋಚಕ ಫೈನಲ್​ ಪಂದ್ಯದಲ್ಲಿ ನೆರೆಯ ರಾಜ್ಯ ತಮಿಳುನಾಡನ್ನ ಮಣಿಸುವ ಮೂಲಕ ಕರುನಾಡಿನ ಹುಡುಗರು ಎರಡನೇ ಬಾರಿಗೆ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡಿದ್ದಾರೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕರ್ನಾಟಕ ತಂಡ ಮನೀಷ್ ಪಾಂಡೆ ಅರ್ಧ ಶತಕದ ಸಹಾಯದಿಂದ ನಿಗದಿತ 20 ಓವರ್ ಗಳಿಗೆ ಐದು ವಿಕೆಟ್ ನಷ್ಟಕ್ಕೆ 180 ರನ್ ದಾಖಲಿಸಿತು. ಆ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ತಮಿಳುನಾಡು ನಿಗದಿತ ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 179 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ಈ ಮೂಲಕ ಕರ್ನಾಟಕಕ್ಕೆ ಒಂದು ರನ್ ಜಯ ಲಭಿಸುಇದ್ದು ಚಾಂಪಿಯನ್ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಕರ್ನಾಟಕ ನೀಡಿದ ಗುರಿಯನ್ನು ಬೆನ್ನತ್ತಿದ ತಮಿಳುನಾಡು ಆರಂಭದಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿ, ಕೊನೆಯ ಎಸೆತದಲ್ಲಿ ಕೇವಲ ಒಂದು ರನ್‌ನಿಂದ ಶರಣಾಯಿತು. ಭಾರೀ ರೋಚಕತೆಗೆ ಕಾರಣವಾದ ಟಿ-20 ಮ್ಯಾಚ್​ನ ಫೈನಲ್​ ಪಂದ್ಯದಲ್ಲಿ ಅಂತಿಮವಾಗಿ ವಿಜಯಲಕ್ಷ್ಮಿ ಕರ್ನಾಟಕಕ್ಕೆ ಒಲಿದಿದ್ದಾಳೆ.

ಕೊನೆಯ ಓವರ್​ನಲ್ಲಿ 11 ರನ್​ ಬೇಕಿತ್ತು. ಈ ವೇಳೆ ಕೃಷ್ಣಪ್ಪ ಗೌತಮ್​ ಬೌಲಿಂಗ್​ಗೆ ಇಳಿದಿದ್ದರು. ಮೊದಲ ಎರಡು ಬಾಲ್​ನಲ್ಲಿ ಅಶ್ವಿನ್​ ಎರಡು ಬೌಂಡರಿ ಬಾರಿಸಿದರು. ನಂತರ ಒಂದು ಬಾಲ್​ ಡಾಟ್​ ಆಗಿತ್ತು. ನಾಲ್ಕನೇ ಬಾಲ್​ಗೆ ಅಶ್ವಿನ್​ ಒಂದು ರನ್​ ಗಳಿಸಿದರು. ಐದನೇ ಬಾಲ್​ನಲ್ಲಿ ಒಂದು ವಿಕೆಟ್​ ಕಬಳಿಸಿದರು ಗೌತಮ್​. ಕೊನೆಯ ಬಾಲ್​ನಲ್ಲಿ ಮೂರು ರನ್​ ಬೇಕಿತ್ತು. ಈ ವೇಳೆ ಒಂದು ರನ್​ ತೆಗೆಯಲು ಅಶ್ವಿನ್​ಗೆ ಸಾಧ್ಯವಾಯಿತು. ಈ ಮೂಲಕ ಕರ್ನಾಟಕ ಒಂದು ರನ್​ಗಳ ಜಯ ಸಾಧಿಸಿತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top