fbpx
ಸಮಾಚಾರ

“ಕನ್ನಡ ಚಿತ್ರರಂಗ ಈಗ ವಿದ್ಯುತ್ ಚಿತಾಗಾರವಾಗಿದೆ, ಚಾಂಡಾಳ ವೃತ್ತಿಯಾಗಿದೆ” ಜಗ್ಗೇಶ್ ಆಕ್ರೋಶ!

ಕನ್ನಡ ಚಿತ್ರರಂಗದ ವಿರುದ್ಧ ಮತ್ತೆ ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೂ ನಟ ಜಗ್ಗೇಶ್ ಆಕ್ರೋಶಕ್ಕೆ ಕಾರಣ ಏನು ಗೊತ್ತಾ? ಹೌದು.. ಇತ್ತೀಚೆಗೆ ನಟ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ಬಿಡುಗಡೆಯಾಗಿತ್ತು. ಬಿಡುಗಡೆಯಾಗಿದ್ದು ಮಾತ್ರವಲ್ಲದೇ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಆದರೆ ಇದೀಗ ಇದೇ ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ ಎಂದು ನಟ ಜಗ್ಗೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಗ್ಲಿಷ್‌ ಕಾನ್ವೆಂಟ್‌ ಶಾಲೆಗಳ ಅಬ್ಬರದ ನಡುವೆ ಸರ್ಕಾರಿ ಶಾಲೆಗಳು ಮುಚ್ಚಿ ಹೋಗುತ್ತಿವೆ. ಶಿಕ್ಷಣ ದಂಧೆ ಕೂಡ ಗಂಭೀರ ಸಮಸ್ಯೆ ಎಂಬುದುನ್ನು ನಿರ್ದೇಶಕ ಕವಿರಾಜ್‌ ತೆರೆ ಮೇಲೆ ಅಚ್ಚುಕಟ್ಟಾಗಿ ತೋರಿಸಿಕೊಟ್ಟಿದ್ದರು. ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿದ್ದ ‘ಕಾಳಿದಾಸ’ನನ್ನು ಇದೀಗ ಏಕಾಏಕಿ ಹೊರ ಹಾಕಲಾಗಿದೆ. ಅಂದರೆ ಅನೇಕ ಚಿತ್ರಮಂದಿರಗಳಿಂದ ಚಿತ್ರವನ್ನು ತೆಗೆದು ಹಾಕಿ, ಪರಭಾಷಾ ಚಿತ್ರಗಳಿಗೆ ಮಣೆ ಹಾಕಲಾಗಿದೆ. ಇದರಿಂದ ನೊಂದಿರುವ ಜಗ್ಗೇಶ್ ಕನ್ನಡ ಚಿತ್ರರಂಗದ ಬಗ್ಗೆ ಟ್ವೀಟ್ ಮೂಲಕ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಜಗ್ಗೇಶ್ ಆಕ್ರೋಶದ ಟ್ವೀಟ್!
ವಿದ್ಯುತ್ ಚಿತಾಗಾರವಾಯಿತು ಕನ್ನಡ ಚಿತ್ರರಂಗ, ಕರುಣೆ ಇಲ್ಲದೇ ಬಂದ ಹೆಣ ಸುಟ್ಟು ದಕ್ಷಿಣೆ ಪಡೆದು ಕಳುಹಿಸುವ ಚಾಂಡಾಳ ವೃತ್ತಿಯಾಗಿದೆ ಚಿತ್ರರಂಗ. ಯಶಸ್ವಿಯಾದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾವನ್ನು ಅನೇಕ ಚಿತ್ರಮಂದಿರದಲ್ಲಿ ಕರುಣೆಯಿಲ್ಲದೇ ಎತ್ತಂಗಡಿ ಮಾಡಲಾಗಿದೆ. ಧನ್ಯವಾದ ಕಿವಿಡು ಕುರುಡು ಚಿತ್ರರಂಗದ ಹಿರಿಯರಿಗೆ! ಉದ್ದಾರ ಕನ್ನಡ ಚಿತ್ರರಂಗ. ಶುಭಮಸ್ತು ಕನ್ನಡಕ್ಕೆ! ಅಂತಾ ಬರೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

ವಿದ್ಯುತ್ ಚಿತಾಗಾರವಾಯಿತು
ಕನ್ನಡ ಚಿತ್ರರಂಗ!
ಕರುಣೆ ಇಲ್ಲದೆ ಬಂದಹೆಣ ಸುಟ್ಟು ದಕ್ಷಿಣೆ ಪಡೆದು ಕಳಿಸುವ ಚಾಂಡಾಳವೃತ್ತಿಯಾಗಿದೆ ಚಿತ್ರರಂಗ!ಯಶಸ್ವಿಯಾದ ಕಾಳಿದಾಸಕನ್ನಡಮೇಷ್ಟ್ರು ಕರುಣೆಯಿಲ್ಲದೆ ಎತ್ತಂಗಡಿ ಅನೇಕ ಚಿತ್ರಮಂದಿರದಲ್ಲಿ!
ಧನ್ಯವಾದ ಕಿವಿಡು ಕುರುಡು
ಚಿತ್ರರಂಗದ ಹಿರಿಯರಿಗೆ!
ಉದ್ದಾರ ಕನ್ನಡಚಿತ್ರರಂಗ..
ಶುಭಮಸ್ತು ಕನ್ನಡಕ್ಕೆ!— ನವರಸನಾಯಕ ಜಗ್ಗೇಶ್ (@Jaggesh2) November 30, 2019

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top