fbpx
ಸಮಾಚಾರ

ನಟನ ಜೊತೆಗೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್!

ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ತಮ್ಮ ಗೆಳೆಯ ನಟ ಕಿರಣ್ ಶ್ರೀನಿವಾಸ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾನುವಾರ ನಟ ಕಿರಣ್ ಶ್ರೀನಿವಾಸ್ ಗುರು ಹಿರಿಯರು ನಿಶ್ಚಯ ಮಾಡಿದ್ದ ಶುಭ ಮುಹೂರ್ತದಲ್ಲಿ ಹಿತಾ ಚಂದ್ರಶೇಖರ್‌ಗೆ ಮಾಂಗಲ್ಯಧಾರಣೆ ಮಾಡಿದ್ದಾರೆ.

ಮಗಳ ಮದುವೆಯನ್ನ ಸಿಹಿ ಕಹಿ ಚಂದ್ರು ಮತ್ತು ಸಿಹಿ ಕಹಿ ಗೀತಾ ದಂಪತಿ ಮುಂದೆ ನಿಂತು ನೆರವೇರಿಸಿದರು. ಅನುಪಮಾ ಗೌಡ, ಕೃಷಿ ತಾಪಂಡ ಸೇರಿದಂತೆ ಕಿರುತೆರೆ ಮತ್ತು ಬೆಳ್ಳಿತೆರೆ ಕಲಾವಿದರು ಮದುವೆಗೆ ಬಂದು ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ.

‘ಒಂಥರಾ ಬಣ್ಣಗಳು’ ಚಿತ್ರದಲ್ಲಿ ಕಿರಣ್ ಹಾಗೂ ಹಿತಾ ಒಟ್ಟಿಗೆ ನಟಿಸಿದ್ದು ನಂತರ ‘ಲವ್‌’ನಲ್ಲಿ ಬಿದ್ದಿದ್ದರು. ಈ ವಿಷಯವನ್ನು ಅವರಿಬ್ಬರ ಸ್ನೇಹಿತೆ ಸೋನು ಗೌಡ “ಒಂಥರಾ ಬಣ್ಣಗಳಲ್ಲಿ ಒಂಥರಾ ಲವ್” ಎಂದು ಬಣ್ಣಿಸಿ ಪೋಸ್ಟ್ ಹಾಕುವ ಮೂಲಕ ಸುಮಾರು ದಿನಗಳ ಹಿಂದೆ ಬಹಿರಂಗ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ನಡೆದು, ಈ ಯುವ ಜೋಡಿ ಈಗ ದಂಪತಿಗಳಾಗಿದ್ದಾರೆ.

ನಟ ಕಿರಣ್ ಹಾಗೂ ಹಿತಾ ಕಳೆದ ಕೆಲ ವರ್ಷಗಳಿಂದ ಪರಸ್ಪರ ಇಷ್ಟಪಟ್ಟಿದ್ದರು. ಕಿರಣ್ 2008ರಲ್ಲಿ “ಹಾಗೆ ಸುಮ್ಮನೆ” ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸ್ದ್ದು ಹಲವು ಸಿನಿಮಾ, ಕಿರುತೆರೆ ಧಾರಆವಾಹಿ, ರಿಯಾಲಿಟಿ ಶೋಗಳಲ್ಲಿ ನಟಿಸಿದ್ದಾರೆ. ಇನ್ನು ಹಿತಾ ಚಂದ್ರಶೇಖರ್ ಸಹ ಬಹಳಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಇತ್ತೀಚೆಗೆ ಬಿಡುಗಡೆಯಾದ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ”ಯಲ್ಲಿ ಸಹ ಹಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top