fbpx
ಸಮಾಚಾರ

ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ: ವಿಶೇಷವಾಗಿ ಶುಭ ಕೋರಿದ ರಾಧಿಕಾ ಪಂಡಿತ್!

ಸ್ಯಾಂಡಲ್‌ವುಡ್‌ನ ಮುದ್ದಾದ ಜೋಡಿ ಯಶ್–ರಾಧಿಕಾ ಅವರ ಕುಟುಂಬದಲ್ಲಿ ಎರಡನೇ ಮಗುವಿನ ಸಂತಸ ನೆಲೆಸಿರುವಾಗಲೇ, ಐರಾಳ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮವೂ ಬಂದಿದೆ. ಹೌದು, ಪುಟಾಣಿ ಐರಾಗೆ ಇಂದು ಮೊದಲ ಹುಟ್ಟುಹಬ್ಬ. ಈ ಸಂಭ್ರಮವನ್ನು ರಾಧಿಕಾ ಪಂಡಿತ್‌ ತಮ್ಮ ಇನ್‌ಸ್ಟಾಗ್ರಾಂ ಪುಟದಲ್ಲಿ ಹಂಚಿಕೊಂಡಿದ್ದಾರೆ. ಯಶ್‌–ರಾಧಿಕಾ ಅಭಿಮಾನಿಗಳು ಐರಾಗೆ ಹುಟ್ಟುಹಬ್ಬದ ಶುಭಾಶಯ ಕೋರಿ, ಆಶೀರ್ವದಿಸಿದ್ದಾರೆ.

ಗರ್ಭಿಣಿಯಾಗಿದ್ದಾಗ ಐರಾಳೊಂದಿಗೆ ತೆಗೆದುಕೊಂಡಿದ್ದ ಫೋಟೊವನ್ನು ಹಾಕಿ ಮಗಳಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಧಿಕಾ ಪಂಡಿತ್ ಮಗಳ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, ‘ನನ್ನ ಬದುಕಿನ ಭಾಗವಾದ, ನನ್ನ ಪುಟಾಣಿ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಐರಾಳ ಮೊದಲ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಾಕಿಂಗ್ ದಂಪತಿ ತಮ್ಮ ಮಗಳ ಫೋಟೋಶೂಟ್ ಮಾಡಿಸಿದ್ದರು. ಮನೆಯೊಳಗೆ ಮತ್ತು ಹೊರಗೆ ಐರಾಳನ್ನು ಕೂರಿಸಿ ಫೋಟೋ ಕ್ಲಿಕ್ಕಿಸಲಾಗಿತ್ತು. ಜೊತೆಗೆ ಐರಾ ಕೂಡ ಕ್ಯಾಮೆರಾಗೆ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಳು. ಐರಾಳ ಹೊಸ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top