fbpx
ಸಮಾಚಾರ

‘ಅಸ್ಪೃಶ್ಯತೆ’ ವಿವಾದ: ಕೈ ಮುಗಿದು ಕ್ಷಮೆ ಕೇಳಿದ ಚೈತ್ರ ಕೋಟೂರು

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅಸ್ಪೃಶ್ಯರು ಎಂದು ಪದ ಬಳಸಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸ್ಪರ್ಧಿ ಚೈತ್ರಾ ಕೋಟೂರು ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ಕನ್ಫೆಷನ್ ರೂಮ್ ನಲ್ಲಿ ಮಾತನಾಡಿದ ಅವರು, “ಇದನ್ನು ಯಾವುದೇ ಒಂದು ಜಾತಿಯ, ಧರ್ಮದ ನೆಲೆಯಲ್ಲಿ ನಾನು ಈ ಪದವನ್ನು ಬಳಸಿಲ್ಲ. ನಿಮ್ಮ ಮನಸಿಗೆ ನೋವಾಗಿದ್ದರೆ ಕ್ಷಮಿಸಿ.

ನಾನು ಕುವೆಂಪು ಅವರ ವಿಶ್ವಮಾನವಳು. ನಾನು ಯಾವುದೇ ಜಾತಿ, ಧರ್ಮಕ್ಕೆ ಒಳಪಟ್ಟಿಲ್ಲ. ಮನುಷ್ಯರು, ಮಾನವೀಯತೆ ಎಂಬುದಕ್ಕೆ ಬೆಲೆ ಕೊಡ್ತೀನಿ. ಖಂಡಿತ ಅಸ್ಪೃಶ್ಯರು ಎಂಬುದು ಇಲ್ಲ, ಸಂಪೂರ್ಣವಾಗಿ ಅದು ಹೋಗಿದೆ. ಈ ಭೂಮಿ ಮೇಲೆ ಇರುವ ಪ್ರತಿಯೊಂದು ಜೀವಿಗೂ ಬದುಕುವ ಹಕ್ಕಿದೆ. ಎಲ್ಲವೂ ಎಲ್ಲರಿಗೂ ಸಮನಾಗಿ ಹಂಚಬೇಕಾದ ಸಮನಾದ ಹಕ್ಕು, ಅದಕ್ಕೆ ನಾನು ಸೇರಿದ್ದೇನೆ. ನಾನು ಯಾರನ್ನೂ ನೋವಿಯಿಸುವ ಕೆಲಸ ಮಾಡಿಲ್ಲ. ನಾನು ಜಾತಿ ಧರ್ಮದ ಬಗ್ಗೆ ಆ ರೀತಿಯ ಪದಗಳನ್ನು ಬಳಸಲ್ಲ. ನನ್ನಿಂದ ತಪ್ಪಾಗಿದ್ದರೆ ಖಂಡಿತ ಕ್ಷಮಿಸಿ” ಎಂದಿದ್ದಾರೆ.

ಏನಿದು ಘಟನೆ:
ಬಿಗ್ ಬಾಸ್ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡಿಕೊಂಡು ತನ್ನದೇ ಲಿಮಿಟೆಡ್‌ ಪ್ರಪಂಚ ಕಾಣುತ್ತಿರುವ ದೀಪಿಕಾ ದಾಸ್‌ಗೆ ಮೊದಲಿನಿಂದಲೂ ಚೈತ್ರಾ ಕೋಟೂರ್‌ ಅಂದ್ರೆ ಅಷ್ಟಕ್ಕಷ್ಟೇ. ಅದಕ್ಕೆ ಚೈತ್ರಾ ‘ದೀಪಿಕಾ ದಾಸ್ ಎಲ್ಲರಿಗೂ ತಿನ್ನಿಸುತ್ತಾರೆ. ತಬ್ಬಿಕೊಳ್ಳುತ್ತಾರೆ. ಮುತ್ತು ಕೊಡುತ್ತಾರೆ ಆದರೆ ನನ್ನ ಮಾತ್ರ ಮುಟ್ಟಲ್ಲ. ಏನು untouchable ಆ ನಾವು? ಅಸ್ಪೃಶ್ಯರಾ ನಾವು? ಎಂದು ಹರೀಶ್‌ ರಾಜ್‌ ಬಳಿ ಚರ್ಚಿಸುತ್ತಾ ನಗುತ್ತಾರೆ.

ಅಸ್ಪೃಶ್ಯತೆ ಬಗ್ಗೆ ಕೋಟೂರು ಹೇಳಿದ ಮಾತಿಗೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಅಷ್ಟೇ ಅಲ್ಲದೆ ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿರುವ ಕೆಲವು ದಲಿತ ಸಂಘಟನೆಗಳು, ಹೇಳಿಕೆ ಬಗ್ಗೆ ಚೈತ್ರಾ ಕ್ಷಮೆ ಕೋರಬೇಕೆಂದು ಆಗ್ರಹಿಸಿದ್ದವು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top