fbpx
ಸಮಾಚಾರ

ವಿನಯ್ ಗುರೂಜಿ ಬೆಂಬಲಿಗರಿಂದ ಸುದೀಪ್ ಅಭಿಮಾನಿ ಮೇಲೆ ರಾಡ್‌ನಿಂದ ಮಾರಣಾಂತಿಕ ಹಲ್ಲೆ.

ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ವಿನಯ್‌ ಗುರೂಜಿ ಅವರ ವಿರುದ್ಧ ಬರಹವನ್ನು ಪೋಸ್ಟ್ ಹಾಕಿದ್ದರಿಂದ ಕುಂದಾಪುರ ಬಳಿಯ ಕೋಟತಟ್ಟು ಗ್ರಾಮದ ಬಾರಿಕೆರೆಯ ನಿವಾಸಿ ರತ್ನಾಕರ ಪೂಜಾರಿ (30) ಎಂಬವರ ಮೇಲೆ ವಿನಯ್ ಗುರೂಜಿ ಬೆಂಬಲಿಗರ ತಂಡವೊಂದು ಹಲ್ಲೆ ನಡೆಸಿದೆ. ಕಿಚ್ಚ ಸುದೀಪ್ ಅಭಿಮಾನಿ ರತ್ನಾಕರ ಪೂಜಾರಿ ಮೇಲೆ 10 ಮಂದಿ ಹಲ್ಲೆ ಮಾಡಿದ್ದು, ಪ್ರಕರಣ ಸಂಬಂಧ ಕುಂದಾಪುರ ನಿವಾಸಿ ಗುರುರಾಜ್ ಪುತ್ರನ್(28), ಸಂತೋಷ್ (30), ಪ್ರದೀಪ್(29), ರವಿರಾಜ್ ಈ ನಾಲ್ವರನ್ನು ಬಂಧಿಸಲಾಗಿದೆ.

ಭಾನುವಾರ ಸಂಜೆ 5.30ಕ್ಕೆ ರತ್ನಾಕರ ಪೂಜಾರಿ ಅವರು ಕುಂದಾಪುರದ ಸಂಗಮ್‌ ಶಾಲೆಯ ಬಳಿ ನಿಂತಿದ್ದಾಗ ಅಲ್ಲಿಗೆ ಬಂದ ಗುರುರಾಜ್, ಸಂತು ಹಾಗೂ ಇತರ 8 – 10 ಮಂದಿ ಬಂದು, ‘ನಮ್ಮ ವಿನಯ್ ಗುರೂಜಿ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡುತ್ತಿಯಾ’ ಎಂದು ಅವಾಚ್ಯ ಶಬ್ದಗಳಿಂದ ಬೈದು, ದೂಡಿ ಹಾಕಿ ರಾಡ್‌ ಮತ್ತು ಹೆಂಚಿನ ತುಂಡಿನಿಂದ ಚೆನ್ನಾಗಿ ಹೊಡೆದಿದ್ದಾರೆ ಎಂದು ಹೇಳಲಾಗಿದೆ.

ಏನಿದು ಘಟನೆ:
ನಟ ಸುದೀಪ್ ಬಗ್ಗೆ ಅವಧೂತ ವಿನಯ್ ಗುರೂಜಿ ಹೇಳಿದ್ದ ಮಾತು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಅದಕ್ಕೆ ಗುರೂಜಿ ಸ್ಪಷ್ಟನೆ ಕೂಡ ಕೊಟ್ಟಿದ್ದರು. ಆದರೆ ಅಭಿಮಾನಿಗಳು ಮಾತ್ರ ಸಾಮಾಜಿಕ ಜಾಲತಾಣಗಳಲ್ಲಿ ಗುರೂಜಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಅಂತೆಯೇ ರತ್ನಕರ ಕೂಡ ವಿನಯ್ ವಿರುದ್ಧ ಆಕ್ರೋಶಗೊಂಡ ಪೋಸ್ಟ್ ಗಳನ್ನ ಹಂಚಿಕೊಂಡಿದ್ದರು.. ಇದರಿಂದ ಕೆರಳಿದ ವಿನಯ್ ಬೆಂಬಲಿಗರು ರತ್ನಕರ ಅವರಿಗೆ ಹಲ್ಲೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top