fbpx
ಸಮಾಚಾರ

ಅಕ್ಟೋಬರ್ 16: ನಾಳೆಯ ಪಂಚಾಂಗ ಮತ್ತು ದಿನ ಭವಿಷ್ಯ.

ಸ್ಥಳ- ಬೆಂಗಳೂರು.
ಬುಧವಾರ, ಅಕ್ಟೋಬರ್ 16 2019
ಸೂರ್ಯೋದಯ : 6:09 am
ಸೂರ್ಯಾಸ್ತ: 6:01 pm
ಶಕ ಸಂವತ : 1941 ವಿಲಂಬಿ

ಅಮಂತ ತಿಂಗಳು :ಆಶ್ವೇಜ
ಪಕ್ಷ : ಕೃಷ್ಣಪಕ್ಷ
ತಿಥಿ : ತೃತೀಯಾ ಪೂರ್ಣ ರಾತ್ರಿ
ನಕ್ಷತ್ರ: ಭರಣಿ 14:22
ಯೋಗ:ಸಿಧ್ಧಿ 28:47
ಕರಣ: ವಾಣಿಜ 18:19 ವಿಷ್ಟಿ ಪೂರ್ಣ ರಾತ್ರಿ

ಅಭಿಜಿತ್ ಮುಹುರ್ತ: 11:41 am – 12:28 pm
ಅಮೃತಕಾಲ : ಯಾವುದೂ ಇಲ್ಲ

ರಾಹುಕಾಲ- 12:05 pm – 1:33 pm
ಯಮಗಂಡ ಕಾಲ- 9:09 am – 10:37 am
ಗುಳಿಕ ಕಾಲ- 10:37 am – 12:05 pm

 

 

 

ನೀವು ಹಿಡಿದ ಹಾದಿ ಸತ್ಯವಾದುದು. ಈ ಬಗ್ಗೆ ಯಾರೂ ನಿಮ್ಮ ಬಗ್ಗೆ ದೂರುವುದಿಲ್ಲ. ನ್ಯಾಯೋಚಿತವಾದ ಮಾರ್ಗವು ಯಾವಾಗಲು ಪ್ರಶಂಸೆಗೆ ಒಳಗಾಗುವುದು. ಎಲ್ಲವೂ ನೀವು ನಂಬಿದ ದೈವದ ಕೃಪೆಯಾಗಿರುವುದು

ಮಾತಿಗೂ ಕೃತಿಗೂ ಅಂತರವನ್ನು ಮಾಡದಿರಿ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಕುಂದು ಉಂಟಾಗುವ ಸಂಭವ ಹಾಗೂ ಹಳೆಯ ಗೆಳೆಯರ ಭೇಟಿ ಸಂಭವ ಇರುತ್ತದೆ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಅಸಡ್ಡೆಯಿಂದ ಕಾಣುವವರನ್ನು ದ್ವೇಷಿಸಬೇಡಿ. ಅವರಿಂದಲೂ ಕೆಲವೊಮ್ಮೆ ಮಹತ್ತರ ಕೆಲಸಗಳು ಆಗುತ್ತವೆ. ಸಹೋದರರ ಸಂಗಡ ಮನಸ್ತಾಪ ಬೇಡ. ಆಂಜನೇಯ ಮಂತ್ರವನ್ನು ಪಠಿಸಿ. ಆಸ್ತಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಮುಂದೂಡುವುದು ಒಳ್ಳೆಯದು.

 

ನಿಮ್ಮ ಅಪರೂಪದ ಪ್ರತಿಭೆಯನ್ನು ಜನರು ಗುರುತಿಸುವ ಅದೃಷ್ಟದ ಕಾಲಘಟ್ಟವು ಇಂದು ನಿಮ್ಮ ಪಾಲಿಗಿದೆ. ಹಾಗಾಗಿ ಮುನ್ನುಗ್ಗಿ ಕೆಲಸ ಕಾರ್ಯಗಳನ್ನು ಹಮ್ಮಿಕೊಳ್ಳಿ. ಜಯವಿರುವವರೆಗೆ ಭರವಿಲ್ಲ ಎಂಬುದನ್ನು ಅರಿಯಿರಿ.

 

 

ಹಿರಿಯರ ಕೃಪಾಶೀರ್ವಾದಗಳ ಫಲವಾಗಿ ಹೆಚ್ಚಿನದನ್ನು ಗಳಿಸಲು ನಿಮಗೆ ಉತ್ತಮವಾದ ಅವಕಾಶಗಳು ಲಭ್ಯವಾಗಲಿದೆ. ಸಮಯ ಮೀರಿ ಆಹಾರ ಸೇವಿಸುವುದರಿಂದ ಉದರ ಶೂಲೆ ಕಾಡುವ ಸಾಧ್ಯತೆ ಇರುತ್ತದೆ.

 

 

ಮಾತು ಎಲ್ಲೆ ಮೀರದಿರಲಿ. ಆನಾವಶ್ಯಕ ಅಪವಾದಗಳು ಬರುವ ಸಾಧ್ಯತೆ ಇರುತ್ತದೆ. ಗುರುಬಲ ರಹಿತರಾದ ನಿಮಗೆ ಇಂದು ನಿಮ್ಮ ಕೈಕೆಳಗಿನ ಅಧಿಕಾರಿಗಳೇ ನಿಮ್ಮನ್ನು ಪೇಚಿಗೆ ಸಿಲುಕಿಸುವರು. ಆಂಜನೇಯನ ಸ್ತೋತ್ರ ಪಠಿಸಿ ಆತ್ಮಶಕ್ತಿಯನ್ನು ಹೆಚ್ಚಿಸಿಕೊಳ್ಳಿ.

 

 

ಸದಾ ಪಾದರಸದಂತೆ ಚುರುಕಾಗಿರುವ ನಿಮ್ಮನ್ನು ಕಂಡು ಹಲವರಿಗೆ ಅಚ್ಚರಿ. ನಿಮ್ಮ ಈ ಉತ್ಸಾಹಶೀಲತೆಯನ್ನು ಮೆಚ್ಚಿ ಹಲವರಿಂದ ಪ್ರಶಂಸೆಗೆ ಒಳಗಾಗುವಿರಿ ಮತ್ತು ಈ ದಿನ ವಿವಿಧ ಮೂಲಗಳಿಂದ ಹಣ ಒದಗಿ ಬರುವುದು.

 

 

ಬದಲಾವಣೆಯ ಮಾರ್ಗವನ್ನು ಬಯಸುವಿರಿ. ಕೆಲವು ಉತ್ತಮ ಗೆಳೆಯರು ನಿಮಗೆ ಸರಿಯಾದ ಮಾರ್ಗದರ್ಶನ ನೀಡುವರು. ನಿಮ್ಮ ಬರಹಗಳಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುವುದು ಮತ್ತು ಕೆಲವು ನಿಗೂಢ ವಿಚಾರಗಳು ನಿಮಗೆ ಇಂದು ಗೋಚರಿಸುವುದು.

 

ಒಳ್ಳೆಯ ಸುದ್ದಿಗಳು ನಿಮಗೆ ಸಂತಸ ನೀಡುವವು. ನಿಮ್ಮ ಉನ್ನತಾಧಿಕಾರಿ ಮತ್ತು ಅಧಿಕಾರಿ ವರ್ಗದವರಿಂದ ಬೆಂಬಲ ವ್ಯಕ್ತವಾಗುವುದು. ಅಧಿಕ ತಿರುಗಾಟದಿಂದ ದೇಹದಲ್ಲಿ ಆಲಸ್ಯ ತೋರುವುದು.

 

ಕೆಲಸದ ಒತ್ತಡ ಹಾಗೂ ಹೊಸ ಜವಾಬ್ದಾರಿಗಳನ್ನು ಏಕಕಾಲಕ್ಕೆ ನಿಭಾಯಿಸಲು ಕಷ್ಟ ಎನಿಸುತ್ತದೆ. ಆದಷ್ಟು ಸಂಯಮದಿಂದ ಇದ್ದು ಕಾರ್ಯ ಪೂರೈಸಿಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.

 

ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸುವುದು ಒಳ್ಳೆಯದಲ್ಲ. ನಿಮಗೆ ಹಿತವೆನಿಸುವ ಕಾರ್ಯ ಕೈಗೆತ್ತಿಕೊಳ್ಳಿ. ಇಲ್ಲದಿದ್ದರೆ ವಿನಾಕಾರಣ ಅಪವಾದಗಳು ನಿಮ್ಮ ಬೆನ್ನತ್ತಿ ಬರುವವು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.

 

ಹೊಸ ಸಂಬಂಧ ಏರ್ಪಡಲಿದ್ದು ಅದು ಪ್ರಮುಖ ಪಾತ್ರ ವಹಿಸಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುವುದು. ನೆರೆಹೊರೆಯವರೊಂದಿಗೆ ಸ್ನೇಹದಿಂದ ವರ್ತಿಸಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top