fbpx
ಸಮಾಚಾರ

ಸೌತ್ ನಟಿ ಜೊತೆ ಡಿಸೆಂಬರ್ 2ಕ್ಕೆ ಕ್ರಿಕೆಟಿಗ ಮನೀಶ್ ಪಾಂಡೆ ಮದುವೆ.

ದಕ್ಷಿಣ ಭಾರತದ ನಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಟೀಂ ಇಂಡಿಯಾ ಆಟಗಾರ ಮನೀಶ್ ಪಾಂಡೆ ಸಜ್ಜಾಗಿದ್ದಾರೆ. ಹೌದು, ಇದೆ ವರ್ಷ ಡಿಸೆಂಬರ್ 2 ರಂದು ಮನೀಶ್ ಪಾಂಡೆ ದಕ್ಷಿಣ ಭಾರತದ ಖ್ಯಾತ ನಟಿ ಅಶ್ರಿತಾ ಶೆಟ್ಟಿ ಅವರನ್ನು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಂಬೈನಲ್ಲಿ ಈ ಜೋಡಿಯ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಮದುವೆಗೆ ಹೆಚ್ಚಿನ ಜನರಿಗೆ ಆಹ್ವಾನವಿಲ್ಲ ಎಂದು ತಿಳಿದುಬಂದಿದ್ದು ಆಪ್ತರಿಗೆ ಮಾತ್ರ ಕರೆ ನೀಡಿದ್ದಾರಂತೆ. ಡಿಸೆಂಬರ್​ನಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು ಟಿ-20 ಸರಣಿ ಆಡಲಿದೆ. ಈ ನಡುವೆ ಪಾಂಡೆ ವಿವಾಹ ನಡೆಯಲಿದೆ ಎನ್ನಲಾಗಿದೆ.

ಇನ್ನು 30 ವರ್ಷ ವಯಸ್ಸಿನ ಮನೀಶ್ ಹಾಗೂ ಆಶ್ರಿತಾ ಅನೇಕ ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆದರೆ ಮದುವೆ ಬಗ್ಗೆ ಇಬ್ಬರೂ ಯಾರಿಗೂ ತಿಳಿಸಿರಲಿಲ್ಲ ಎಂದು ವರದಿಯಾಗಿದೆ.

ಆಶ್ರಿತಾ ಶೆಟ್ಟಿ ಯಾರು?
ಮುಂಬೈ ಮೂಲದ ನಟಿ, ರೂಪದರ್ಶಿ ಆಗಿರುವ ಆಶ್ರಿತಾ ಶೆಟ್ಟಿ 2012ರಲ್ಲಿ ತೆಲಿಕೆದ ಬೊಳ್ಳಿ ತುಳ್ಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲರಿಸಿದ್ದರು. ಅಲ್ಲಿಂದ ಬಳಿಕ ಟಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿರುವ ಆಶ್ರಿತಾ ಶೆಟ್ಟಿ ನಾಲ್ಕು ತಮಿಳು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಉದಯಂ ಎನ್‌ಎಚ್ 4 (2013), ಒರು ಕನ್ನಿಯುಂ ಮೂನು ಕಲವಾನಿಕಲುಂ (2014) ಹಾಗೂ ಇಂದ್ರಜಿತ್ (2017) ಚಿತ್ರಗಳಾಗಿವೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top