fbpx
ಸಮಾಚಾರ

ಖ್ಯಾತ ಚಿತ್ರಸಾಹಿತಿ, ನಿರ್ದೇಶಕ ಕವಿರಾಜ್ ತಂದೆ ವಿಧಿವಶ.

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ಗೀತಾರಚನೆಕಾರ ಕವಿರಾಜ್‌ ಅವರ ತಂದೆವಿಧಿವಶರಾಗಿದ್ದಾರೆ. ಕವಿರಾಜ್ ತಂದೆ ಹರಿಯಪ್ಪ ನಾಯ್ಕ (65) ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ವಿಧಿವಶರಾಗಿದ್ದಾರೆ. ಹರಿಯಪ್ಪ ನಾಯ್ಕ ಹಲವು ತಿಂಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲ ನೀಡದೆ ಇಹಲೋಕ ತ್ಯಜಿಸಿದ್ದಾರೆ.

ಬಂಗಾರಪ್ಪ ಅವರ ಶಿಷ್ಯರಾಗಿ, ಸಮಾಜವಾದಿ ಹೋರಾಟಗಾರರಾಗಿ ಗುರುತಿಸಿಕೊಂಡಿದ್ದ ಹರಿಯಪ್ಪನಾಯ್ಕ ಪತ್ನಿ, ಪುತ್ರ ಕವಿರಾಜ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರ ಅಂತ್ಯ ಸಂಸ್ಕಾರ ಮಂಡಗದ್ದೆ ಬಳಿ ಇರುವತ್ತಿಯಲ್ಲಿ ಮಂಗಳವಾರ ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮಂಡಗದ್ದೆ ಬಳಿ ಇರುವತ್ತಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ. ಅಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ.

 

 

ಇನ್ನು ‘ಕರಿಯಾ’ ಚಿತ್ರದಲ್ಲಿ ಗೀತರಚನೆಕಾರನಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಕವಿರಾಜ್‌ ಚಿತ್ರಗಳಿಗೆ ಸೂಪರ್ ಹಿಟ್‌ ಹಾಡುಗಳನ್ನು ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top