fbpx
ಸಮಾಚಾರ

ಮೊದಲ ವಾರವೇ ಎಲಿಮಿನೇಟ್ ಆಗೋದನ್ನ ತಪ್ಪಿಸಿಕೊಳ್ಳಲು 6 ಜನರ ಪೈಪೋಟಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 7 ಪ್ರಾರಂಭವಾಗಿದ್ದು ಆರಂಭದಲ್ಲಿ ಭಾರಿ ಕುತೂಹಲ ಕೆರಳಿಸಿದೆ. ವಿವಿಧ ಕ್ಷೇತ್ರಗಳಿಂದ ಒಟ್ಟು 18 ಜನ ಸೆಲೆಬ್ರೆಟಿಗಳು ಸ್ಪರ್ದಿಗಳಾಗಿ ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದಾರೆ.. ಕಾರ್ಯಕ್ರಮದ ಮೊದಲ ದಿನವೇ ಸ್ಪರ್ಧಿಗಳಿಗೆ ನಾಮಿನೇಷನ್ ಮೂಲಕ ಬಿಗ್ ಬಾಸ್ ಶಾಕ್ ನೀಡಿದ್ದಾರೆ..

 

 

ಬಿಗ್ ಬಾಸ್ ಮನೆಯಿಂದ ಈವಾರ ಹೊರಗಡೆ ಹೋಗಲು ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಮನೆಯ ಬರೋಬ್ಬರಿ 6 ಜನ ಸ್ಪರ್ದಿಗಳು ನಾಮಿನೇಟ್ ಆಗಿದ್ದಾರೆ.. ಮನೆಯ ಎಲ್ಲಾ ಸದಸ್ಯರು ವೋಟಿಂಗ್ ಮೂಲಕ 5 ಜನ ಸ್ಪರ್ದಿಗಳನ್ನು ನಾಮಿನೇಟ್ ಮಾಡಿದರೆ, ಇನ್ನು ಕ್ಯಾಪ್ಟನ್ ಆಯ್ಕೆಗೆ ನಡೆದ ಚಟುವಟಿಕೆಯಲ್ಲಿ ಕುರಿ ಪ್ರತಾಪ್ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ..

ಮನೆಯ ಸದಸ್ಯರ ಆಯ್ಕೆಯ ಅನುಸಾರ 1. ಪತ್ರಕರ್ತ ರವಿ ಬೆಳಗೆರೆ, 2.ಚೈತ್ರ ವಸುದೇವನ, 3.ರಾಜು ತಾಳಿಕೋಟೆ, 4.ಗುರುಲಿಂದ ಸ್ವಾಮಿ, 5.ಚೈತ್ರ ಕೊಟ್ಟೂರು ಸೇರಿ ಐದು ಮಂದಿ ನಾಮಿನೇಟ್ ಆದರು., ಅಲ್ಲಿಗೆ ನೇರ ನಾಮಿನೇಟ್ ಆದ ಕುರಿ ಪ್ರತಾಪ್ ಅವರನ್ನೂ ಸೇರಿ ಮೊದಲ ವಾರ ಮನೆಯಿಂದ ಎಲಿಮಿನೇಟ್ ಆಗಲು ಒಟ್ಟು ಆರು ಜನರು ನಾಮಿನೇಟ್ ಆಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top