fbpx
ಸಮಾಚಾರ

ಮನೆಯಲ್ಲಿ ಇನ್ನೂ ಮುಗಿದಿಲ್ಲ ರವಿ ಬೆಳಗೆರೆ ಜರ್ನಿ?

ಅನಾರೋಗ್ಯದ ಕಾರಣ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದ ಪತ್ರಕರ್ತ ರವಿ ಬೆಳಗೆರೆ ನಾಟಕೀಯ ಬೆಳವಣಿಗೆಯಲ್ಲಿ ಮತ್ತೆ ವಾಪಸ್ ಆಗಿದ್ದಾರೆ. ಆರೋಗ್ಯದಲ್ಲಿ ಚೇತರಿಕೆಯಾದ ಹಿನ್ನೆಲೆಯಲ್ಲಿ ಪತ್ರಕರ್ತ ರವಿ ಬೆಳಗೆರೆ ಬಿಗ್‌ಬಾಸ್ ಮನೆಗೆ ವಾಪಸ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಘಟನೆ?
ನೆನ್ನೆ ತಾನೇ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟಿದ್ದ ಪತ್ರಕರ್ತ ರವಿ ಬೆಳಗೆರೆ ಅವರು ಮೊದಲ ದಿನವೇ ಬಿಗ್‌ ಬಾಸ್ ಮನೆಯಿಂದ ಮೊದಲ ದಿನವೇ ಹೊರಬಂದಿದ್ದರು. ರವಿ ಬೆಳಗೆರೆ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಅವರು ಬಿಗ್‌ ಬಾಸ್‌ ಷೋನಿಂದ ಅನುಮತಿ ಪಡೆದುಕೊಂಡು ಹೊರ ಬಂದಿದ್ದರು. ಈ ವಿಚಾರ ಸೋಮವಾರ ರಾತ್ರಿ ಪ್ರಸಾರವಾಗುವ ಸಂಚಿಕೆಯಲ್ಲಿ ತೋರಿಸುವ ಸಾಧ್ಯತೆ ಇದೆ.

ಬಿಗ್ ಬಾಸ್ ಮನೆಯ ಶೌಚಾಲಯದಲ್ಲಿ ಕಾಲುಜಾರಿ ಬಿದ್ದ ಪರಿಣಾಮ ಆಂಬುಲೆನ್ಸ್​ ಮೂಲಕ ಅವರನ್ನು ಪದ್ಮನಾಭ ನಗರದ ಅವರ ನಿವಾಸಕ್ಕೆ ಕರೆದುಕೊಂಡು ಬರಲಾಗಿತ್ತು. ಅಲ್ಲಿಯೇ ರವಿ ಬೆಳಗೆರೆ ಅವರು ವಿಶ್ರಾಂತಿ ಪಡೆದು ಈಗ ಬಿಗ್ ಬಾಸ್ ಮನೆಗೆ ಮತ್ತೆ ವಾಪಾಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top