fbpx
ಸಮಾಚಾರ

ಅಂದು ಕಿಚ್ಚನ ಅಪಹಾಸ್ಯ ಮಾಡಿ ಇಂದು ಉಲ್ಟಾ ಹೊಡೆದ ದೇವಮಾನವ ವಿನಯ್ ಗುರೂಜಿ!

ಇತ್ತೀಚೆಗೆ ಸ್ಯಾಂಡಲ್​ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರನ್ನು ಅಪಹಾಸ್ಯ ಮಾಡಿದ್ದ ಗೌರಿಗದ್ದೆ ದತ್ತಪೀಠದ ವಿನಯ್ ಗುರೂಜಿ ಇಂದು ಅದೇ ಸುದೀಪ್ ಅವರನ್ನು ಹಾಡಿಹೊಗಳಿದ್ದಾರೆ. ವಿನಯ್ ಗುರೂಜಿ ಕಿಚ್ಚನನ್ನು ಗುಣಗಾನ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು, ಸುದೀಪ್ ಅವರನ್ನು ಕಿಚಾಯಿಸಿದ್ದ ವಿನಯ್ ಗುರೂಜಿ ಈಗ ಸುದೀಪ್ ಮಾಣಿಕ್ಯ, ಹೆಬ್ಬುಲಿ ಅಂತ ಹೊಗಳಿದ್ದಾರೆ. “ಶಿವಮೊಗ್ಗದ ಪುಟ್ಟ ಹಳ್ಳಿಯಿಂದ ಬಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯುವಾಗ ಸುದೀಪ್ ಎಷ್ಟು ಕಷ್ಟ ಅನುಭವಿಸಿ ಬಂದಿರಬೇಕು. ಸುದೀಪ್ ಗುಣಕ್ಕೆ, ಸಾಧನೆಗೆ ಸಾಷ್ಟಾಂಗ ನಮಸ್ಕಾರ.. ಸುದೀಪ್ ಕನ್ನಡ ನಾಡಿನ ಹೆಬ್ಬುಲಿ, ನಿಜವಾದ ಮಾಣಿಕ್ಯ. ಅವರು ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದವರು. ಗಾಂಧಿನಗರದಲ್ಲಿ ಮುಂದೆ ಬರೋದು ಅಷ್ಟು ಸುಲಭದ ಮಾತಲ್ಲ. ನಾವು ಅದನ್ನು ಗೌರವಿಸುತ್ತೇವೆ.” ಎಂದು ವಿನಯ್ ಗುರೂಜಿ ಹೇಳಿದ್ದಾರೆ.

“ಗಲಭೆ ಹುಟ್ಟುಹಾಕೋಕೆ ಅಂತಲೇ ಕೆಲವು ಜನರು ಪ್ರಯತ್ನ ಮಾಡುತ್ತಲೇ ಇರುತ್ತವೆ. ನನ್ನ ಭಾಷಣಗಳನ್ನ ಇಟ್ಕೊಂಡು ಅವರಿಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ನಾನು ಸುದೀಪ್ ಅವರನ್ನು ಅಪಹಾಸ್ಯ ಮಾಡಿಲ್ಲ, ಅವರ ಮೇಲೆ ತುಂಬಾನೇ ಗೌರವ ಇದೆ” ಎಂದು ವಿನಯ್ ಗುರೂಜಿ ಸಮಜಾಯಿಷಿ ನೀಡಿದ್ದಾರೆ.

ಈ ಮೊದಲು ಗುರೂಜಿ ಹೇಳಿದ್ದೇನು?
ಸುದೀಪ್ ಸಿನಿಮಾ ನೋಡಿ ರೋಮ ಎಲ್ಲ ಎದ್ದು ನಿಲ್ಲುತ್ತೆ ಅಂತ ಹುಡುಗರು ಹೇಳುತ್ತಾರೆ. ಅವನು ಮಾಣಿಕ್ಯ- ಹೆಬ್ಬುಲಿ ಅಂತೆ. ಸರಿಯಾದ ಹುಲಿ ಬಂದ್ರೆ ಓಡಿಹೋಗುತ್ತಾನೇ ಎಂದು ಗುರೂಜಿ ಅಪಹಾಸ್ಯ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top