fbpx
ಸಮಾಚಾರ

ಬಿಗ್ ಬಾಸ್ ಮನೆಗೆ ಕಾಲಿಡುತ್ತಿದ್ದಂತೆ ಸಿಗರೇಟ್ ಕೇಳಿದ ರವಿ ಬೆಳಗೆರೆ: ವಿಡಿಯೋ ನೋಡಿ.

ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ ಕಾರ್ಯಕ್ರಮದ ಮತ್ತೊಂದು ಸೀಸನ್ನನ್ನು ಪ್ರಾರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಬಹು ನಿರೀಕ್ಷೆಯ ಬಿಗ್ ಬಾಸ್ 7ನೇ ಆವೃತ್ತಿ ಇಂದು (ಅಕ್ಟೋಬರ್ 13ರಂದು) ಆರಂಭವಾಗಲಿದೆ. ಕಳೆದ ಆರು ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಿಚ್ಚ ಸುದೀಪ್ ಮತ್ತೊಮ್ಮೆ ಬಿಗ್ ಬಾಸ್ ಆಗಲು ರೆಡಿಯಾಗಿದ್ದಾರೆ..

ಇಂಥಾ ಬಿಗ್ ಬಾಸ್ ಮನೆಗೆ ಈ ಭಾರಿ ಅವರು ಹೋಗ್ತಾರಂತೆ, ಇವರು ಹೋಗ್ತಾರಂತೆ ಎಂಬಂತ ರೂಮರುಗಳು ಸಾಮಾಜಿಕ ಜಾಲತಾಣದಲ್ಲಿ ಸಿಕಾಪಟ್ಟೆ ಹರಿದಾಡುತ್ತಿದ್ದಾವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಈ ನಡುವೆ ಕಲರ್ಸ್ ಕನ್ನಡ ವಾಹಿನಿಯೇ ಕುರಿಪ್ರತಾಪ್ ಮತ್ತು ರವಿ ಬೆಳೆಗೆರೆ ಅವರು ಬಿಗ್ ಬಾಸ್ ಮನೆಯ ಒಳಗೆ ಸೇರಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ.

“ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳಗೆರೆ ಪ್ರತಾಪ” ಎಂದು ಬರೆದು ಕುರಿ ಪ್ರತಾಪ್ ಮತ್ತು ರವಿ ಬೆಳಗೆರೆ ಬಿಗ್ ಬಾಸ್ ಮನೆಯೊಳಗೇ ಇರುವ ವಿರುವ ವಿಡಿಯೋವನ್ನು ಕಲರ್ಸ್ ಕನ್ನಡ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ.

ವಿಡಿಯೋದಲ್ಲಿರುವುದುದೇನು?
ರವಿ ಬೆಳಗೆರೆ ಅವರು ಕುರಿ ಪ್ರತಾಪ್ ಅವರ ಜೊತೆ ಮಾತನಾಡುತ್ತಾ ತಮ್ಮ ಸ್ಟೈಲ್ ನಲ್ಲಿ ಸೀದಾ ಕ್ಯಾಮೆರಾ ಹತ್ತಿರ ಹೋಗಿ ಬಿಗ್‌ಬಾಸ್‌ಗೆ “ಬಿಗ್‌ಬಾಸ್, ನನ್ ಸಿಗರೇಟ್ ಏನಾಯ್ತು? ಕಳಿಸಿಕೊಡಿ ಬಿಗ್‌ಬಾಸ್ ಎಷ್ಟೊತ್ತಾಯ್ತು? ತುಂಬಾ ಹೊತ್ತು ಸೇದದೇ ಇರಬಾರದು ಡಾಕ್ಟರ್ ಹೇಳಿದಾರೆ” ಅಂತಾ ಹೇಳುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top