fbpx
ಸಮಾಚಾರ

ರಾಜ್ಯದಲ್ಲೀಗ ಪ್ರಜಾಕೀಯದ್ದೇ ಹವಾ: ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್

ಪ್ರಜಾಕೀಯದ ಮೂಲಕ ರಾಜಕೀಯಕ್ಕೆ ಕಾಲಿಟ್ಟಿರುವ ನಟ ಉಪೇಂದ್ರ ಅವರು ಇಂದು ಕರೆ ಕೊಟ್ಟಿರುವ ಪ್ರಜಾಕೀಯಕ್ಕಾಗಿ #UPPforKARNATAKA ಟ್ವಿಟರ್ ಅಭಿಯಾನ ಈಗ ದೇಶಾದ್ಯಂತ ಟಾಪ್ ಟ್ರೆಂಡಿಂಗ್ ಆಗಿದೆ. ಉಪೇಂದ್ರ ಅವರು ಹೇಳುವಂತೆ ಈ ಟ್ರೆಂಡಿಂಗ್ ನ ಮೂಲ ಉದ್ದೇಶ ಪ್ರಜಾಕೀಯದ ಪ್ರಣಾಳಿಕೆಯಲ್ಲಿನ ಅಂಶಗಳನ್ನು ಮತ್ತು ವಿಚಾರಗಳನ್ನು ಅನಿಸಿಕೆಗಳನ್ನು ಈಗ ಹ್ಯಾಷ್ಟ್ಯಾಗ್ ಮೂಲಕ ಬಳಸಿ ತಿಳಿಸುವುದು ಇದರ ಮೂಲ ಉದ್ದೇಶವಾಗಿದೆ. ಈ ಹಿನ್ನೆಲೆ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಈ ಹ್ಯಾಷ್ಟ್ಯಾಗ್​ ಬಳಸಿ ಪ್ರಜಾಕೀಯ ಪಕ್ಷದ ಪ್ರಣಾಳಿಕೆಗಳನ್ನು ಜನರಿಗೆ ತಲುಪಿಸುವ ಕಾರ್ಯ ಮಾಡ್ತಿದ್ದು, ಟ್ವಿಟರ್​ನಲ್ಲಿ ಉಪ್ಪಿಯ ಪ್ರಜಾಕಿಯ ಸದ್ದು ಮಾಡ್ತಿದೆ.

ಈ ಕುರಿತು ಮೊನ್ನೆಯೇ ಟ್ವೀಟ್​ ಮಾಡಿದ್ದ ಉಪೇಂದ್ರ ‘ನಾಳೆ ನಡೆಯುವ ಪ್ರಜಾಕೀಯ ಟ್ವಿಟರ್​​​ ಟ್ರೆಂಡ್​​​​​​ನಲ್ಲಿ ಕೇವಲ ಹ್ಯಾಷ್ಟ್ಯಾಗ್​​ ಬಳಸೋ ಬದಲು. ಪ್ರಜಾಕೀಯದ ಪ್ರಣಾಳಿಕೆಯಲ್ಲಿರುವ ಅಂಶಗನ್ನ ಉಪೇಂದ್ರರವರ ಮಾಧ್ಯಮಗಳಲ್ಲಿನ ಸಂದರ್ಶನಗಳ ತುಣುಕುಗಳನ್ನು, ಸಮಸ್ಯೆಗಳಿಗೆ ಸೂಚಿಸಿದ ಪರಿಹಾರಗಳನ್ನು, ಪ್ರಜಾಕೀಯದ ವಿಚಾರಗಳು ಹಾಗೂ ಅನಿಸಿಕೆಗಳನ್ನು ಒಂದೊಂದಾಗಿ #UPPforKARNATAKA ಹ್ಯಾಷ್​ ಟ್ಯಾಗ್ ಬಳಸಿ ಟ್ವೀಟ್​ ಮಾಡಿ, ಜನರಿಗೆ ಪ್ರಜಾಕೀಯದ ವಿಚಾರಗಳನ್ನು ಹಂಚುವುದು ಈ ಟ್ರೆಂಡ್​ ಗುರಿ’ ಎಂದು ಹೇಳಿದ್ದರು.

ಇದರ ಜೊತೆಗೆ ಇನ್ನೊಂದು ಟ್ವೀಟ್ ಮಾಡಿರುವ ಉಪ್ಪಿ, ಸತ್ ಪ್ರಜೆ, ಅವನಾರಡಿ ನೀನಾರಡಿ! ಅವತಿನ್ನುವುದು ಅನ್ನ, ನೀ ತಿನ್ನುವುದೂ ಅನ್ನ. ಪಂಚೇಂದ್ರಿಯಗಳು ಅವನಿಗುಂಟು ನಿನಗೂ ಉಂಟು. ಎಲ್ಲ ಸಮ ಎಂದು ಹುಟ್ಟಿಸಿದ ಆ ನಿನ್ನಪ್ಪ. ನೀ ಮಾತ್ರ ಆ ನಾಯಕ ಈ ನಾಯಕನಿಗೆ ನಾ ಭಕ್ತ ನಾ ಗುಲಾಮ ಅಂತ ಕುಂತ್ಯಲೋ ಬೆಪ್ಪ ಎಂದು ತಮ್ಮದೇ ಶೈಲಿಯಲ್ಲಿ ಟ್ವೀಟ್ ಮಾಡಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top