fbpx
ಸಮಾಚಾರ

ಮೈಸೂರಿನಲ್ಲಿ ಕಾರ್ ರೇಸ್‍ಗೆ ಚಾಲನೆ ಕೊಟ್ಟ ದರ್ಶನ್

ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ದಸರಾ ಪ್ರವಾಸೋದ್ಯಮ ಉಪ ಸಮಿತಿ ಹಾಗೂ ಆಟೋಮೋಟಿವ್ ಸ್ಪೋರ್ಟ್ಸ್ ಕ್ಲಬ್ ಮೈಸೂರು ವತಿಯಿಂದ ಲಲಿತ್ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ಆಯೋಜಿಸಿರುವ ಗ್ರಾವೆಲ್ ಫೆಸ್ಟ್ ಕಾರು ರೇಸ್ ಸ್ಪರ್ಧೆ ನಡೆಯುತ್ತಿದೆ. ಕಾರ್ ರೇಸ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಾಲನೆ ಕೊಟ್ಟಿದ್ದಾರೆ.

ಚಾಲೆಜಿಂಗ್ ಸ್ಟಾರ್ ದರ್ಶನ್ ಅವರು ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಕಾರ್ ರೇಸ್‍ಗೆ ಚಾಲನೆ ನೀಡಿದ್ದಾರೆ. ಒಟ್ಟು 9 ವಿಭಾಗದಲ್ಲಿ ಗ್ರಾವೇಲ್ ಫೆಸ್ಟ್ ರೇಸ್ ನಡೆಯಲಿದೆ. ಕಾರ್ ರೇಸ್‍ನಲ್ಲಿ 120 ಕಾರುಗಳು ಮತ್ತು 170 ಡ್ರೈವರ್‌ಗಳು ಭಾಗಿಯಾಗಲಿದ್ದಾರೆ. ಈ ಮೂಲಕ ಗ್ರಾವೇಸ್ ಫೆಸ್ಟ್ ಕಾರ್ ರೇಸ್ ಸ್ಪರ್ಧೆ ರೋಚಕವಾಗಿರುತ್ತದೆ.

ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಗೋವಾ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ರಾಜ್ಯಗಳಿಂದ ರ್ಯಾಲಿ ಡ್ರೈವರ್ ಗಳು ಆಗಮಿಸಿದ್ದಾರೆ. 1100 ಸಿಸಿ ವರಗೆ , 1100 ಸಿಸಿಯಿಂದ 1400 ಸಿಸಿ ವರೆಗೆ, 1400 ಸಿಸಿಯಿಂದ 1650 ಸಿಸಿ ವರೆಗೆ, ಇಂಡಿಯನ್ ಓಪನ್ ಕ್ಲಾಸ್, ಅನ್ರಿಸ್ಟ್ರಿಕ್ಟೆಡ್ ಕ್ಲಾಸ್, ಲೇಡಿಸ್ ಕ್ಲಾಸ್, ಎಸ್ ಯುವಿ ಕ್ಲಾಸ್ ಗಳಲ್ಲಿ ನಡೆಯುವ ಸ್ಪರ್ಧೆ ಇದಾಗಿದೆ. ಈ ಬಾರಿ ಮೈಸೂರಿನ 16 ಮಂದಿ ಪ್ರತಿಭೆಗಳು ಹಾಗೂ 10 ಮಂದಿ ಮಹಿಳಾ ಸ್ಪರ್ಧಿಗಳು ಭಾಗಿಯಾಗಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top