fbpx
ಸಮಾಚಾರ

ಕಾರು ನಿಲ್ಲಿಸಿ ವಯಸ್ಸಾದ ವ್ಯಕ್ತಿಗೆ ಹಣ ನೀಡಿದ ಶಿವಣ್ಣ: ದೊಡ್ಮನೆ ದೊಡ್ಮಗನ ದೊಡ್ಡ ಗುಣಕ್ಕೆ ವ್ಯಾಪಕ ಮೆಚ್ಚುಗೆ.

ಸಂಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತ ಚಾಚುವ ಅನೇಕ ಸ್ಯಾಂಡಲ್​ವುಡ್ ನಟರಿದ್ದಾರೆ. ಇನ್ನು ಹಲವು ನಟ-ನಟಿಯರು ಯಾರಿಗೂ ತಿಳಿಯದಂತೆ ತಮ್ಮದೇ ರೀತಿಯಲ್ಲಿ ಸಮಾಜ ಸೇವೆಯನ್ನೂ ಮಾಡುತ್ತಿದ್ದಾರೆ. ರಣ ಬಿಸಿನಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ವಯಸ್ಸಾದ ವ್ಯಕ್ತಿಯೊಬ್ಬರಿಗೆ ಸ್ಯಾಂಡಲ್‌ವುಡ್‌ನ ಖ್ಯಾತ ನಟರೊಬ್ಬರು ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.. ಯಾರು ಆ ನಟ ಅಂತೀರಾ? ಮುಂದೆ ಓದಿ.

ವಯೋವೃದ್ಧನಿಗೆ ಸಹಾಯ ಮಾಡಿದ ಆ ನಟ ಮತ್ಯಾರು ಅಲ್ಲ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್. ನಾಗವಾರದ ಬಳಿ ಶಿವರಾಜ್ ಕುಮಾರ್ ಹೋಗುತ್ತಿದ್ದಾಗ ಬಿಸಿಲಲ್ಲಿ ನಿಂತಿದ್ದ ವೃದ್ಧರೊಬ್ಬರನ್ನು ನೋಡಿದ್ದಾರೆ. ಕೂಡಲೇ ತಮ್ಮ ಕಾರನ್ನು ನಿಲ್ಲಿಸಿ ಜೇಬಿನಲ್ಲಿದ್ದ ಹಣವನ್ನು ತೆಗೆದು ವೃದ್ಧನಿಗೆ ನೀಡಿದ್ದಾರೆ.

ಈ ದೃಶ್ಯವನ್ನು ಪಕ್ಕದಲ್ಲಿದ್ದ ಒಬ್ಬರು ಸೆರೆಹಿಡಿದ್ದಾರೆ. ಹಣ ಕೊಡುತ್ತಿರುವ ವ್ಯಕ್ತಿ ಯಾರು ಎಂದು ನಂತರ ಗಮನಿಸಿದಾಗ ಗೊತ್ತಾಗಿದೆ ಅದೂ ಶಿವಣ್ಣ ಎಂದು. ಈ ಫೋಟೋದಲ್ಲಿ ಶಿವಣ್ಣ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದ್ರೆ ಫೋಟೋ ಕ್ಲಿಕ್ಕಿಸಿದವರಿಗೆ ಒಂದು ಲುಕ್ ಕೊಟ್ಟು ಅಲ್ಲಿದ್ದ ಹೊರಟು ಹೋಗಿದ್ದಾರೆ. ಸದ್ಯ ಫೋಟೋ ಸಾಮಾಜಿಕಜಾಲತಾಣದಲ್ಲಿ ಹರಿದಾಡ್ತಿದ್ದು, ಫೋಟೋ ನೋಡಿದವರು ದೊಡ್ಮನೆ ಗುಣವೇ ಇದು. ತಂದೆಗೆ ತಕ್ಕ ಮಗ ಇವರು. ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top