fbpx
ಸಮಾಚಾರ

ಮೆಟ್ರೋದಲ್ಲಿ ಸಂಚರಿಸುವ ಆಸೆಯನ್ನು ಈಡೇರಿಸಿಕೊಳ್ಳಲು ನಟಿ ರಚಿತಾ ರಾಮ್ ಮಾಡಿದ್ದೇನು ಗೊತ್ತೆ?

ಸೆಲೆಬ್ರಿಟಿಗಳು ತಮ್ಮ ಸಣ್ಣ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳಲು ಪಾಡುಪಡಬೇಕಾಗುತ್ತದೆ. ಏಕೆಂದರೆ ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕ್ಕೊಳ್ಳುವುದು ಇದಕ್ಕೆ ಮುಖ್ಯ ಕಾರಣ. ಹೀಗಾಗಿಯೇ ಹಲವು ಸೆಲೆಬ್ರಿಟಿಗಳು ವೇಷಮರೆಸಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಾರೆ. ಅಂತಹದ್ದೆ ಒಂದು ಪ್ರಯತ್ನ ಮಾಡಿ ಡಿಂಪಲ್ ಕ್ವೀನ್ ರಚಿತಾ ರಾಮ್ ತಮ್ಮ ಬಹುದಿನಗಳ ಆಸೆಯನ್ನು ಈಡೇರಿಸಿಕೊಂಡಿದ್ದಾರೆ.

 

 

ಮೆಟ್ರೋ ರೈಡ್ ಮಾಡಬೇಕೆಂಬುದು ರಚಿತಾ ಅವರ ಕನಸಾಗಿತ್ತಂತೆ ಹಾಗಾಗಿ ಅವರು ತಮ್ಮ ಮುಖವನ್ನು ಬಟ್ಟೆಯಲ್ಲಿ ಮುಚ್ಚಿಕೊಂಡು ಯಾರಿಗೂ ತಿಳಿಯದ ಹಾಗೆ ಮೆಟ್ರೋದಲ್ಲಿ ಸಂಚಾರ ಮಾಡಿ ಖುಷಿ ಪಟ್ಟಿದ್ದಾರೆ. ಮೆಟ್ರೋ ನಿಲ್ದಾಣದಲ್ಲಿ ನಿಂತಿರುವ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ರಚಿತಾ ರಾಮ್ ಹಂಚಿಕೊಂಡಿದ್ದಾರೆ. ಮೆಟ್ರೋ ಪ್ರಯಾಣ ಮಾಡಿಸಿದ ತೇಜು ಕಾರಂತಿಗೆ ಧನ್ಯವಾದ ಹೇಳಿದ್ದಾರೆ.

 

 

 

ರಚಿತಾ ರಾಮ್ ತಮ್ಮ ಟ್ವಿಟ್ಟರಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ನಿಂತು ಮುಖಕ್ಕೆ ಕಟ್ಟಿದ್ದ ಸ್ಕಾರ್ಫ್ ತೆಗೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಮ್ಮ ಬೆಂಗಳೂರು, ನಮ್ಮ ಮೆಟ್ರೋ, ನನ್ನ ಕನಸಿನ ಸವಾರಿ ಮಾಡಿಸಲು ಕರೆದುಕೊಂಡು ಹೋಗಿದ್ದ ತೇಜು ಕಾರಂತಿಗೆ ಧನ್ಯವಾದ” ಎಂದು ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top