fbpx
ಸಮಾಚಾರ

ಅಚ್ಚರಿಗೆ ಕಾರಣವಾದ ಸುಮಲತಾ ನಡೆ: ಬಿಜೆಪಿ ಸೇರುತ್ತಾರಾ ಮಂಡ್ಯ ಸಂಸದೆ?

ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಮಂಡ್ಯ ಸಂಸದೆ ಸುಮಲತಾ ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಾ ಹರಿದಾಡುತ್ತಿದ್ದವು. ಆದರೆ, ಅಧಿಕೃತವಾಗಿ ಅವರು ಎಲ್ಲಿಯೂ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ. ಬಿಜೆಪಿ ನಾಯಕರನ್ನು ಬೆಂಬಲಿಸಿ ಮಾತನಾಡುತ್ತಿದ್ದ ಅವರು, ಇದೇ ಮೊದಲ ಬಾರಿಗೆ ಇಂದು ಬಿಜೆಪಿಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದು, ಅವರು ಅಧಿಕೃತವಾಗಿ ಕಮಲಪಾಳಯ ಸೇರುತ್ತಾರಾ ಎಂಬ ಅನುಮಾನ ಮೂಡಿದೆ.

ಸಭೆಯಲ್ಲಿ ಮಾತನಾಡಿದ ಸುಮಲತಾ ಅವರು “ಈ ಮೊದಲೇ ನಾಲ್ಕೈದು ಬಾರಿ ಬಿಜೆಪಿ ಸಭೆಗೆ ಬರಬೇಕಾಗಿತ್ತು. ಆದರೆ ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ. ಅದ್ದರಿಂದ ಇಂದು ಬಂದಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ನನ್ನ ಪರವಾಗಿ ಕೆಲಸ ಮಾಡಿದ್ದರು. ಹಾಗಾಗಿ ಅವರಿಗೆ ಧನ್ಯವಾದ ಹೇಳಬೇಕಾಗಿತ್ತು. ಆ ಕಾರಣದಿಂದ ಇಂದು ಬಿಜೆಪಿ ಸದಸ್ಯರ ಸಭೆಯಲ್ಲಿ ಭಾಗಿಯಾಗಿದ್ದೇನೆ” ಎಂದು ತಿಳಿಸಿದರು.

ಇನ್ನು ಬಿಜೆಪಿ ಸೇರುತ್ತೀರಾ ಎಂಬ ಪ್ರಶ್ನೆಗೆ ಕೇಳಿದ ಸುಮಲತಾ “ಬಿಜೆಪಿಗೆ ಸೇರುವುದು ಎಂದು ನಿಶ್ಚಯಿಸಿದರೆ, ಇದರಲ್ಲಿ ಮುಚ್ಚುಮರೆ ಮಾಡುವ ಅವಶ್ಯಕತೆ ಇಲ್ಲ. ಕದ್ದು ಮುಚ್ಚಿ ಬಿಜೆಪಿ ಸೇರುವುದಿಲ್ಲ, ಎಲ್ಲರಿಗೂ ತಿಳಿಸಿ ಅಧಿಕೃತವಾಗಿ ಸೇರುತ್ತೇನೆ. ಬಿಜೆಪಿಗೆ ಕೇಂದ್ರದಲ್ಲಿ 330ಕ್ಕೂ ಹೆಚ್ಚು ಲೋಕಸಭಾ ಸದಸ್ಯರಿದ್ದಾರೆ. ನಾನು ಸೇರ್ಪಡನೆಯಾಗಲೇ ಬೇಕು ಎಂಬ ಅವಶ್ಯಕತೆ ಇಲ್ಲ. ಆದರೆ ಜಿಲ್ಲೆಯ ಅಭಿವೃದ್ಧಿ ವಿಚಾರಕ್ಕೆ ಬಿಜೆಪಿ ಸಹಕಾರ ಕೇಳುವುದು ನನ್ನ ಕರ್ತವ್ಯ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top