fbpx
ಸಮಾಚಾರ

ಕೇಂದ್ರ ಸರ್ಕಾರದಿಂದ ಇಂದು (ಸೆಪ್ಟೆಂಬರ್ 14) ರಾಷ್ಟ್ರೀಯ ಹಿಂದಿ (ಹೇರಿಕೆಯ) ದಿವಸ್ ಆಚರಣೆ..! ಕರಾಳ ದಿನವನ್ನು ವಿರೋಧಿಸೋಣ ಬನ್ನಿ.

ಸೆಪ್ಟೆಂಬರ್ 14 ಈ ದಿನ ಹಿಂದಿ ಭಾಷೆಯನ್ನು ಭಾರತದ ಆಡಳಿತವೆಂಬ ಸಿಂಹಾಸನದ ಮೇಲೆ ಕೂರಿಸಿ ಉಳಿದೆಲ್ಲಾ ಭಾಷೆಗಳು ಹಿಂದಿ ಭಾಷೆಗಿಂತ ಕಡಿಮೆ ಸ್ಥಾನಕ್ಕೆ ಸೀಮಿತಗೊಳಿಸಿದ ದಿನ, ಹಿಂದಿ ಎಂದರೆ ಭಾರತದ ರಾಷ್ಟ್ರಭಾಷೆ ಎನ್ನುವ ಸುಳ್ಳಿನ ಕಟ್ಟಡವನ್ನು ಕಟ್ಟಲು ಅಡಿಪಾಯ ಹಾಕಿದ ದಿನ. ನಾಳೆ ಕೇಂದ್ರ ಸರ್ಕಾರ “ರಾಷ್ಟ್ರೀಯ ಹಿಂದಿ ದಿವಸ್” ಅನ್ನು ಆಚರಿಸಲಿದೆ. ಈ ಮೂಲಕ ಕೇಂದ್ರ ಸರ್ಕಾರ ಹಿಂದಿ ಭಾಷೆಗೆ ಮಾತ್ರ ಪ್ರಾಮುಖ್ಯತೆಯನ್ನು ನೀಡಿ ಉಳಿದ ಭಾಷೆಯನ್ನೂ ಕಡೆಗಣಿಸುತ್ತಿದೆ. ಹಿಂದಿ ಭಾಷೆಯೊಂದೇ ಶ್ರೇಷ್ಠ ಎಂಬುದನ್ನು ಎತ್ತಿಹಿಡಿಯುವ ಕೆಲಸಮಾಡುತ್ತದೆ.

 

 

ಈ ಮೂಲಕ ಹಿಂದಿಯೇತರ ರಾಜ್ಯಗಳಲ್ಲಿ ಹಿಂದಿಯ ಬಳಕೆಯನ್ನು ನಿರಂತರವಾಗಿ ಹೆಚ್ಚಿಸಲು ಯೋಜನೆಗಳನ್ನು ಹಾಕಿಕೊಂಡು ಹೆಜ್ಜೆಹೆಜ್ಜೆಯಾಗಿ ಹಿಂದಿ ಹೇರಿಕೆಯನ್ನು ಮಾಡುವ ಉದ್ದೇಶದಿಂದ ಈ ರೀತಿಯ ಆಚರಣೆಗಳನ್ನು ಮಾಡುತ್ತಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಎಲ್ಲಾ ಹಿಂದಿಯೇತರ ರಾಜ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಂದಿಯ ಬಲವಾದ ಹೇರಿಕೆಯನ್ನು ಮಾಡಿಕೊಂಡು ಬಂದಿದೆ. ಹಾಗಾಗಿ ಕನ್ನಡಿಗರ ಶಿಕ್ಷಣ, ಉದ್ಯೋಗ, ವ್ಯಾಪಾರ ವಹಿವಾಟುಗಳಲ್ಲಿ ಹಿಂದೀ ಹೇರಿಕೆ ನಡೆಯುತ್ತಿದೆ.

 

 

ನಾಳೆ ಅಂದ್ರೆ ಸೆಪ್ಟೆಂಬರ್ 14 ಕೇಂದ್ರ ಸರ್ಕಾರ ರಾಷ್ಟ್ರೀಯ ಹಿಂದಿ ದಿವಸ್ ಅನ್ನು ಆಚರಣೆ ಮಾಡಲಿದೆ ಆದರೆ ನಾವು ಕನ್ನಡಿಗರು ಇದಕ್ಕೆ ಬೆಂಬಲ ನೀಡಬಾರದು. ಈ ಆಚರಣೆಯನ್ನು ವಿರೋಧಿಸಬೇಕು ಅವರ ರಾಷ್ಟ್ರೀಯ ಹಿಂದಿ ದಿವಸ್ ಅನ್ನು ರಾಷ್ಟ್ರೀಯ ಹಿಂದಿ ಹೇರಿಕೆಯ ದಿನವೆಂದು ತಿಳಿದುಕೊಂಡು ಹಿಂದಿವಾಲಗಳ ಹಿಂದಿ ಹೇರಿಕೆಯನ್ನು ವಿರೋಧಿಸಬೇಕು ವಿರೋಧಿಸುವ ಅನಿವಾರ್ಯತೆ ಕನ್ನಡಿಗರಿಗಿದೆ. . ಕನ್ನಡವನ್ನು ಕಡ್ಡಾಯವಾಗಿ ಬಳಸಿಯೇ ಬಳಸುತ್ತೇನೆ ಎಂದು ಕನ್ನಡಿಗರು ಸಂಕಲ್ಪ ಮಾಡಬೇಕು. ಭಾಷಾ ವೈವಿಧ್ಯತೆಯ ಭಾರತ ದೇಶದಲ್ಲಿ ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನ ಸಿಗಬೇಕೆಂದು ಒತ್ತಾಯಿಸಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top