fbpx
ಸಮಾಚಾರ

ದೂರುಗಳನ್ನು ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ ಕಾರ್ಮಿಕ ಇಲಾಖೆ.

ಯಾವುದೇ ಇಲಾಖೆಯಾಗಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಕ್ರಮಕೈಗೊಳ್ಳಬೇಕು. ಜನರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಮುಕ್ತ ಅವಕಾಶ ಇರಬೇಕು. ಇದೀಗ ಈ ನಿಟ್ಟಿನಲ್ಲಿ ಕಾರ್ಮಿಕ ಇಲಾಖೆ ಕ್ರಮ ಕೈಗೊಂಡಿದ್ದು ಇಲಾಖೆಯ ವಿಚಾರವಾಗಿ ಯಾವುದೇ ಕುಂದು ಕೊರತೆ, ಸಮಸ್ಯೆಗಳು ಏನಾದರೂ ಇದ್ದಲ್ಲಿ ಅವನ್ನು ಸ್ವೀಕರಿಸಲು ಕಾರ್ಮಿಕ ಇಲಾಖೆ ನಿರ್ಧರಿಸದೆ.

 

 

ಕಾರ್ಮಿಕ ಇಲಾಖೆಯ ಸಂಭಂದ ಏನಾದರೂ ಸಲಹೆ, ಸೂಚನೆ ಮತ್ತು ದೂರು ಗಳು ಇದ್ದರೇ 9632060006ಗೆ ಸಂದೇಶ ಕಳುಹಿಸುವಂತೆ ಹೇಳಲಾಗಿದೆ. ಇದೆ ಸೆಪ್ಟೆಂಬರ್ 18ರಂದು ಅಹವಾಲುಗಳನ್ನು ಸ್ವೀಕರಿಸಲು ಕಾರ್ಮಿಕ ಇಲಾಖೆ ನಿರ್ಧಾರ ಮಾಡಿದೆ.

“ನಿಮ್ಮ ಉತ್ತಮವಾಗಿ ಸೇವೆ ಸಲ್ಲಿಸಲು ಕರ್ನಾಟಕದ ನಮ್ಮ ಕಾರ್ಮಿಕ ಇಲಾಖೆಯ ನಿಮ್ಮಿಂದ ಅಹವಾಲುಗಳನ್ನು ನಾವು ಸ್ವಾಗತಿಸುತ್ತೇವೆ! ಹಾಗಾಗಿ, ನೀವು ಇಂಡಸ್ಟ್ರಿ ಕ್ಯಾಪ್ಟನ್ ಅಥವಾ ಟ್ರೇಡ್ ಯೂನಿಯನ್ ನಾಯಕರಾಗಿದ್ದರೆ ಮತ್ತು ನಿಮ್ಮ ದೂರನ್ನು ಹೇಳಲು ಬಯಸಿದ್ದರೇ 9632060006ಗೆ ಸಂದೇಶ ಕಳುಹಿಸಿ. 18.9.2019 ಮುಂಜಾನೆ ನಾವು ನಿಮ್ಮ ಮಾತನ್ನು ಕೇಳಲು ಬಯಸುತ್ತೇವೆ.” ಎಂದು ಕಾರ್ಮಿಕ ಇಲಾಖೆ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top