fbpx
ಸಮಾಚಾರ

ದಬಂಗ್- 3 ಕನ್ನಡ ಮೋಷನ್​ ಪೋಸ್ಟರ್​ ರಿಲೀಸ್: ಕನ್ನಡದಲ್ಲಿ ಮಾತನಾಡಿದ ಸಲ್ಮಾನ್ ಖಾನ್

ನಟ ಸಲ್ಮಾನ್​ ಖಾನ್​ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ನಟಿಸಿದ್ದು ಬಾಲಿವುಡ್​ನಲ್ಲಿ ಮಾತ್ರ. ಅವರು ಬೇರೆ ಭಾಷೆಯ ಚಿತ್ರರಂಗಕ್ಕೆ ಕಾಲಿಡುವ ಪ್ರಯತ್ನವನ್ನೇ ಮಾಡಿಲ್ಲ. ‘ದಬಾಂಗ್​ 3’ ಮೂಲಕ ಇದೇ ಮೊದಲ ಬಾರಿಗೆ ಸಲ್ಲು ಏಕಕಾಲಕ್ಕೆ ಸ್ಯಾಂಡಲ್​ವುಡ್​, ಟಾಲಿವುಡ್​ ಹಾಗೂ ಕಾಲಿವುಡ್​ಗೆ ಕಾಲಿಡುತ್ತಿದ್ದಾರೆ. ‘ದಬಾಂಗ್-3’ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

 

 

ವಿಶೇಷ ಅಂದ್ರೆ ರಿಲೀಸ್​ ಆಗಿರುವ ‘ದಬಾಂಗ್​ 3’ ಮೋಷನ್​ ಪೋಸ್ಟರ್​ನಲ್ಲಿ ಎಲ್ಲವೂ ಕನ್ನಡಮಯ! ಖುದ್ದು ಸಲ್ಮಾನ್​ ಖಾನ್​ ಕನ್ನಡದಲ್ಲಿ ಡೈಲಾಗ್​ ಹೇಳಿದ್ದು ಮೋಷನ್​ ಪೋಸ್ಟರ್​ನ ಹೈಲೈಟ್​. ಕೊನೆಯಲ್ಲಿ ತೋರಿಸುವ ಚಿತ್ರದ ಶೀರ್ಷಿಕೆ, ಸಿನಿಮಾ ರಿಲೀಸ್​ ಡೇಟ್​, ನಿರ್ಮಾಪಕರು, ನಿರ್ದೇಶಕರ ಹೆಸರು ಹೀಗೆ ಪ್ರತಿಯೊಂದು ವಿಚಾರವನ್ನು ಕನ್ನಡದಲ್ಲೇ ಬರೆಯಲಾಗಿದೆ.

ಚುಲ್ ಬುಲ್ ಪಾಂಡೆ “ಟೈಂ ನಂದೂ ತಾರಿಖು ನಂದು” ಎಂದು ಕನ್ನಡದಲ್ಲೂ ಮಾತನಾಡಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಕೂಡ ಟ್ವೀಟ್ ಮಾಡಿದ್ದಾರೆ. “ನಾವು ಕನ್ನಡಿಗರು ನಿಮ್ಮನ್ನು ಹೃದಯಪೂರ್ವಕ ಸ್ವಾಗತ ಮಾಡುತ್ತಿದ್ದೇವೆ ಸಲ್ಮಾನ್ ಸರ್. ಇಲ್ಲಿಯ ಜನ ಯಾವಾಗಲು ನಿಮ್ಮನ್ನು ಇಷ್ಟಪಡುತ್ತಾರೆ. ಈಗ ಕನ್ನಡ ಮಾತನಾಡುತ್ತಿರುವುದರಿಂದ ನಿಮ್ಮ ಮೇಲಿನ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ” ಎಂದು ಹೇಳಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top