fbpx
ಸಮಾಚಾರ

ರಶ್ಮಿಕಾ ಮೇಲೆ ಕಾಲು ಹಾಕಿ ಉದ್ದಟತನ ಪ್ರದರ್ಶಿಸಿದ ವಿಜಯ್ ದೇವರಕೊಂಡ ವಿರುದ್ಧ ನೆಟ್ಟಿಗರ ಕಿಡಿ! ವಿಡಿಯೋ ವೈರಲ್

ಇತ್ತೀಚೆಗೆ ಕನ್ನಡ ಬರುವುದಿಲ್ಲ ಎಂದು ತಮಿಳು ಚಾನೆಲ್ ನಲ್ಲಿ ಹೇಳಿದ್ದ ರಶ್ಮಿಕ ಮಂದಣ್ಣ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾಳೆ. ತೆಲುಗು ನಟ ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅಭಿನಯ ಮಾಡಿದ್ದ ‘ಡಿಯರ್ ಕಾಮರ್ಡ್’ ಚಿತ್ರ ತಕ್ಕಮಟ್ಟಿಗೆ ಯಶಸ್ಸು ಕಂಡಿತ್ತು . ಈ ಸಂತೋಷವನ್ನು ಹಂಚಿಕೊಳ್ಳಲು ತೆಲುಗಿನ ಖಾಸಗಿ ವಾಹಿನಿಯಲ್ಲಿ ಮತ್ತು ರಶ್ಮಿಕ ಸಂದರ್ಶನ ನೀಡಿದ್ದರು. ಈ ವೇಳೆ ವಿಜಯ್ ದೇವರಕೊಂಡ ಉದ್ಧಟತನ ತೋರುವ ಮೂಲಕ ನೆಟ್ಟಿಗರ ಕೋಪಕ್ಕೆ ಕಾರಣರಾಗಿದ್ದಾರೆ.

ವಿಡಿಯೋ ಇಲ್ಲಿ ನೋಡಿ:👇👇👇

 

ರಶ್ಮಿಕಾಗೆ ನಿರೂಪಕಿ “ಗೀತಗೋವಿಂದಂ ಹಾಗೂ ಡಿಯರ್ ಕಾಮ್ರೇಡ್ ಚಿತ್ರದ ಎರಡು ಪಾತ್ರಗಳು ನಿಮಗೆ ಹೇಗೆ ಭಿನ್ನ” ಎಂದು ಪ್ರಶ್ನೆ ಕೇಳುತ್ತಾರೆ. ಇದಕ್ಕೆ ಉತ್ತರಿಸಿದ ರಶ್ಮಿಕಾ “ಜೀವನ ಎಂದ ಮೇಲೆ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಬೇಕು ಗೀತ, ಲಿಲ್ಲಿ ಹಾಗೂ ಈ ತಾತನ ಜೊತೆ ನಟಿಸಬೇಕು ಎಂದು ವಿಜಯ್ ದೇವರಕೊಂಡ ಅವರ ಕಡೆ ಕೈ ತೋರಿಸಿ ಹೇಳಿದರು. ರಶ್ಮಿಕಾ ಹೇಳಿದನ್ನು ಕೇಳಿದ ದೇವರಕೊಂಡ ರಶ್ಮಿಕಾ ಅವರ ಮೇಲೆ ಕಾಲು ಹಾಕಿ ಉದ್ಧಟತನ ಮೆರೆದಿದ್ದಾರೆ.

“ತಾತ ಅಂದ್ಯಲ್ಲಾ ಸರಿ ತಾತನ ಕಾಲು ಒತ್ತು ಎಂದು ರಶ್ಮಿಕಾ ಮೇಲೆ ಕಾಲು ಹಾಕಿತ್ತಾರೆ, ಆದರೆ ರಶ್ಮಿಕಾ ಕೋಪಿಸಿಕೊಳ್ಳದೆ ತಾಳ್ಮೆಯಿಂದ ವಿಜಯ್ ಕಾಲನ್ನು ಕೆಳಗಿಳಿಸುತ್ತಾರೆ. ನಂತರ ಮತ್ತೊಮ್ಮೆ ರಶ್ಮಿಕಾ ಮೇಲೆ ವಿಜಯ್ ಕಾಲು ಹಾಕುತ್ತಾರೆ, ಆಗಲೂ ನಗುನಗುತ್ತಾ ವಿಜಯ್ ಕಾಲನ್ನು ರಶ್ಮಿಕಾ ಕೆಳಗಿಳಿಸುತ್ತಾರೆ. ವಿಜಯ್ ದೇವರಕೊಂಡ ಅವರ ಈ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top