fbpx
ಸಮಾಚಾರ

ಈ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಜಿಂಬಾಂಬ್ವೆಯನ್ನು ನಿಷೇದ ಮಾಡಿದ ಐಸಿಸಿ.

ರಾಜಕೀಯ ಮಧ್ಯ ಪ್ರವೇಶ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಜಿಂಬಾಬ್ವೆ ಕ್ರಿಕೆಟ್ ತಂಡ ಮತ್ತು ಸಂಸ್ಥೆಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಅಮಾನತು ಮಾಡಿದೆ. ತ್‌ಕ್ಷಣದಿಂದಲೇ ಜಾರಿಗೆ ಬರುವಂತೆಯೇ ಗುರುವಾರದಂದು ಜಿಂಬಾಬ್ವೆ ಕ್ರಿಕೆಟ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಜಾಗೊಳಿಸಿದೆ. ಇದರೊಂದಿಗೆ ಜಿಂಬಾಬ್ವೆ ಕ್ರಿಕೆಟ್‌ ಪುನರುಜ್ಜೀವನಕ್ಕೆ ಭಾರಿ ಹೊಡೆತ ಬಿದ್ದಿದೆ.

 

 

ಜಿಂಬಾಬ್ವೆ ಕ್ರಿಕೆಟ್ ನಲ್ಲಿ ಅಲ್ಲಿನ ಸರ್ಕಾರ ಮತ್ತು ರಾಜಕೀಯ ಮುಖಂಡರು ಪದೇ ಪದೇ ಮಧ್ಯ ಪ್ರವೇಶ ಮಾಡಿದ್ದರಿಂದ ಕಠಿಣ ಕ್ರಮ ಕೈಗೊಂಡಿರುವ ಐಸಿಸಿ ಜಿಂಬಾಬ್ವೆ ಕ್ರಿಕೆಟ್ ಸಂಸ್ಥೆ ಮತ್ತು ತಂಡವನ್ನು ಅಮಾನತು ಮಾಡಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ನಿಯಮಗಳ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಜಿಂಬಾಂಬ್ವೆ ಕ್ರಿಕೆಟ್‌ ಅನ್ನು ತಕ್ಷಣದಿಂದ ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಮುಖ್ಯಸ್ಥ ಶಶಾಂಕ್ ಮನೋಹರ್, ಸದಸ್ಯ ರಾಷ್ಟ್ರದ ವಜಾಗೊಳಿಸಿರುವ ಪ್ರಕರಣವನ್ನು ಹಗುರವಾಗಿ ತೆಗೆದುಕೊಂಡಿಲ್ಲ. ಕ್ರಿಕೆಟ್ ರಾಜಕೀಯ ಮುಕ್ತವಾಗಿರಬೇಕು. ಜಿಂಬಾಬ್ವೆಯಲ್ಲಿ ಐಸಿಸಿ ಸಂವಿಧಾನದ ಗಂಭೀರ ಉಲ್ಲಂಘನೆಯಾಗಿದೆ. ಐಸಿಸಿ ಸಾಂವಿಧಾನಿಕ ಬದ್ಧವಾಗಿ ಜಿಂಬಾಬ್ವೆಯಲ್ಲಿ ಕ್ರಿಕೆಟ್ ಮುಂದುವರಿಸಲು ಮಂಡಳಿ ಬಯಸುತ್ತಿದೆ ಎಂದಿದ್ದಾರೆ.

ಈ ಅಮಾನತು ರದ್ದುಗೊಳ್ಳುವವರೆಗೂ ಐಸಿಸಿಯ ಆರ್ಥಿಕ ನೆರವು ಜಿಂಬಾಬ್ವೆ ತಂಡಕ್ಕೆ ಸಿಗಲ್ಲ. ಅಷ್ಟೇ ಅಲ್ಲದೆ ಐಸಿಸಿ ಆಯೋಜಿಸುವ ಯಾವ್ದೇ ಟೂರ್ನಿಯಲ್ಲೂ ಆ ತಂಡ ಪಾಲ್ಗೊಳ್ಳುವಂತಿಲ್ಲ. ಐಸಿಸಿಯ ಈ ನಿರ್ಧಾರಕ್ಕೆ ಜಿಂಬಾಬ್ವೆಯ ಕ್ರಿಕೆಟಿಗರಾದ ಸಿಕಂದರ್ ರಾಜಾ, ಬ್ರೆಂಡನ್ ಟೇಲರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಟ್ವಿಟರ್ ಮೂಲಕವೇ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಗುಡ್ ಬೈ ಹೇಳಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top