fbpx
ಸಮಾಚಾರ

“ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ” ಪ್ರಸ್ತುತ ರಾಜಕೀಯ ಪರಿಸ್ಥಿತಿಯ ವಿರುದ್ಧ ಕಿಡಿಕಾರಿದ ಉಪೇಂದ್ರ.

ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಹೈ ಡ್ರಾಮಾದಿಂದ ರಾಜ್ಯದ ಜನತೆ ತೋಳಲಾಟಕ್ಕೆ ಸಿಲುಕುವಂತಾಗಿದೆ. ಮತದಾನ ಪ್ರಭುಗಳು ಮತ ನೀಡಿ ಹಾರಿಸಿದ ಶಾಸಕರು ಕಚ್ಚಾಡುತ್ತಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಸಂಬಂಧ ನೆನ್ನೆ ನಡೆದ ಕಲಾಪ ಇನ್ನಿಲ್ಲದಂತಾ ಸನ್ನಿವೇಶಗಳಿಗೆ ಎಡೆ ಮಾಡಿಕೊಟ್ಟಿದೆ. ಪ್ರಸ್ತುತ ರಾಜ್ಯ ರಾಜಕೀಯ ಪರಿಸ್ಥಿತಿ ಕುರಿತು ಚಿತ್ರ ನಟ ಹಾಗೂ ಉತ್ತಮ ಪ್ರಜಾಕೀಯ ಪಕ್ಷದ ಸ್ಥಾಪಕ ಉಪೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

ಈ ಕುರಿತು ಟ್ವೀಟ್ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿರುವ ಅವರು, “ರಾಜಕೀಯ ವ್ಯವಸ್ಥೆ ಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ಪ್ರಜೆಗಳಿಗೆ ಬೆಲೆ. ಆ ನಂತರ ನಾವು ಮೂಕ ಪ್ರೇಕ್ಷಕರು ಅಷ್ಟೆ.ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು. ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಮತ್ತು ಕಾರ್ಯಕರ್ತರು ಆಗ್ಬೇಕು ಮತ್ತೊಬ್ಬ ನಾಯಕ ಮಾಡಲಿ ಎಂದು ಕಾಯಬಾರದು” ಎಂದು ಟ್ವೀಟ್ ಮಾಡಿದ್ದಾರೆ.

ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ. ಬಳಿಕ ನಾವು ಮೂಕ ಪ್ರೇಕ್ಷಕರು ಎಂದು ಟೀಕಿಸಿದ್ದಾರೆ. ನಿನ್ನೆಯ ಕಲಾಪವನ್ನು ನೋಡಿದರೆ ಬಹಳಷ್ಟು ಜನರಿಗೆ ಇಂಥ ಭಾವನೆ ಬರುವುದು ಸಹಜ ಎಂಬಂತಿದೆ ಇಂದಿನ ಈ ರಾಜ್ಯದ ಪರಿಸ್ಥಿತಿ ಎನ್ನಬಹುದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top