fbpx
ಸಮಾಚಾರ

ಸೀರಿಯಲ್ ಲೋಕಕ್ಕೆ ಪಾದಾರ್ಪಣೆ ಹಿರಿಯ ನಟಿ ಶ್ರುತಿ

ಹಿರಿಯ ನಟಿ ಶೃತಿ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರ ಎರಡರಲ್ಲೂ ಸಕ್ರಿಯರಾಗಿದ್ದಾರೆ. ‘ಮಜಾ ಭಾರತ’ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರಿತೆರೆಗೆ ಕಾಲಿಟ್ಟಿದ್ದ ಶೃತಿ ಈಗ ಧಾರಾವಾಹಿಗೂ ಕಾಲಿಟ್ಟಿದ್ದಾರೆ.

ನಟಿ ಶ್ರುತಿಯವರನ್ನು ಕಿರುತೆರೆಯಲ್ಲಿ ಕಾಣುವ ಅವಕಾಶವನ್ನು ಉದಯ ಟಿವಿ ಒದಗಿಸುತ್ತಿದೆ. ಸರೆಗಮಾ ಇಂಡಿಯಾ ಲಿಮಿಟೆಡ್ ನಿರ್ಮಾಣದಲ್ಲಿ ಶ್ರೀನಿವಾಸ್ ಶಿಡ್ಲಘಟ್ಟ ನಿರ್ದೇಶನದಲ್ಲಿ ಪ್ರತಿದಿನ ರಾತ್ರಿ 7.30ಕ್ಕೆ ಉದಯಟಿವಿ ಯಲ್ಲಿ ಮೂಡಿಬರುತ್ತಿರುವ ಸೇವಂತಿ ಧಾರಾವಾಹಿಯಲ್ಲಿ ವಿಶೇಷ ಅತಿಥಿ ಕಲಾವಿದೆಯಾಗಿ ಭಾಗವಹಿಸುತ್ತಿರುವ ಶ್ರುತಿ ಯವರು, ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿಕೊಳ್ಳುತ್ತಿದ್ದಾರೆ.

ಸೇವಂತಿಗೆ ಪರಿಚಯ ಇರುವ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಶ್ರುತಿ ಸೇವಂತಿಯನ್ನು ಭೇಟಿಯಾಗಲು ಶ್ರುತಿ ಅರ್ಜುನ್ ಮನೆಗೆ ಬರುತ್ತಾರೆ. ಶ್ರುತಿಯ ಎಂಟ್ರಿಯಿಂದ ಮನೆಯರಿಗೆ ಖುಷಿ ನೀಡುತ್ತೆ. ಸೇವಂತಿ ಮತ್ತು ಅರ್ಜುನ್ ಅವರದ್ದು ಒಪ್ಪಂದದ ಮದುವೆ ಎಂದು ಗೊತ್ತಿರದಿದ್ದರು ಸೂಕ್ಷ್ಮಮಾಗಿ ಶ್ರುತಿ ಎಲ್ಲವನ್ನು ಗಮನಿಸುತ್ತಿರುತ್ತಾರೆ. ಶ್ರುತಿ ಆಗಮನದಿಂದ ಇಬ್ಬರ ಬದುಕಲ್ಲಿ ಹೊಸ ತಿರುವು ಪಡೆದುಕೊಳ್ಳಲಿದೆ.

ಶ್ರುತಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ವೀಕ್ಷಕರಿಗು ಹೊಸ ಉತ್ಸಾಹ ತುಂಬಿದೆ. ಶ್ರುತಿ ಸದ್ಯ ಮೋಹನದಾಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮಹಾತ್ಮ ಗಾಂಧಿ ತಾಯಿ ಪುತಲೀಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top