fbpx
ಸಮಾಚಾರ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮುಡಿಗೆ ಮತ್ತೊಂದು ಕಿರೀಟ.

ಕ್ರಿಕೆಟ್ ದೇವರು ಎಂದೇ ಪ್ರಸಿದ್ಧಿ ಪಡೆದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹಾಲ್ ಆಫ್ ಫೇಮ್ ಗೌರವ ನೀಡಿ ಗೌರವಿಸಿದೆ.

 

 

ಸಚಿನ ತೆಂಡುಲ್ಕರ್ ಜತೆಗೆ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಅಲನ್ ಡೊನಾಲ್ಡ್ ಹಾಗೂ ಎರಡು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ಆಟಗಾರ್ತಿ ಕ್ಯಾಥರಿನ್ ಫಿಟ್ಜ್’ಪ್ಯಾಟ್ರಿಕ್ ಕೂಡಾ ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗಿದ್ದಾರೆ. ಹಾಲ್ ಆಫ್ ಫೇಮ್ ಗೌರವಕ್ಕೆ ಭಾಜನರಾಗುತ್ತಿದ್ದಂತೆ ಪ್ರತಿಕ್ರಿಯಿಸಿದ ಸಚಿನ್, ಇದು ನನಗೆ ಸಿಗುತ್ತಿರುವ ಅತಿದೊಡ್ಡ ಗೌರವವಾಗಿದೆ ಎಂದು ಹೇಳಿದ್ದಾರೆ.

ಈ ಮೊದಲು ಭಾರತದ ಬಿಷನ್ ಸಿಂಗ್ ಬೇಡಿ[2009], ಸುನಿಲ್ ಗವಾಸ್ಕರ್[2009], ಕಪಿಲ್ ದೇವ್[2009], ಅನಿಲ್ ಕುಂಬ್ಳೆ[2015] ಹಾಗೂ ರಾಹುಲ್ ದ್ರಾವಿಡ್[2018] ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದರು.

ಹಾಲ್ ಆಫ್ ಫೇಮ್ ಎಂದರೇನು?
ಕ್ರಿಕೆಟ್‌ ಜಗತ್ತಿಗೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಆಟಗಾರರನ್ನು ಗೌರವ ಸಲ್ಲಿಸುವ ಸಲುವಾಗಿ 2009ರಲ್ಲಿ ಐಸಿಸಿ ‘ಹಾಲ್‌ ಆಫ್‌ ಫೇಮ್‌’ ಎಂಬ ಪುರಸ್ಕಾರವನ್ನು ಆರಂಭಿಸಿತು. ಈ ಗೌರವಕ್ಕೆ ಪಾತ್ರರಾಗುವವರು ಎಲ್ಲಾ ಪೀಳಿಗೆಯ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದೆನಿಸಿಕೊಳ್ಳುತ್ತಾರೆ.. ಹಾಲ್ ಆಫ್ ಪಟ್ಟಿಗೆ ಸೆೇರಲು ಕೆಲವೊಂದು ಮಾನದಂಡಗಳಿವೆ. ಬ್ಯಾಟ್ಸ್‌ಮನ್‌ಗಳು 8000 ರನ್ ಮತ್ತು 20 ಶತಕಗಳನ್ನು ಗಳಿಸಿರಬೇಕು. ಇನ್ನು ಬೌಲರ್‌ಗಳು 200ಕ್ಕೂ ಹೆಚ್ಚು ವಿಕೆಟ್ ಪಡೆದಿರಬೇಕು. ಹಾಗೆಯೇ ಹಾಲ್ ಆಫ್ ಫೇಮ್ ಪಟ್ಟಿಗೆ ಸೇರಲು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಕನಿಷ್ಠ ಐದು ವರ್ಷವಾಗಿರಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top