fbpx
ಸಮಾಚಾರ

ವಿಶ್ವಕಪ್ ಫೈನಲ್ ಓವರ್ ಥ್ರೋ ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಐಸಿಸಿ: ಹೇಳಿದ್ದೇನು ಗೊತ್ತಾ?

2019ರ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಕೊನೆ ಓವರ್ ನಲ್ಲಿ ಓವರ್ ಥ್ರೋಗೆ ಅಂಪೈರ್ ಗಳು 6 ರನ್ ನೀಡಿದ ಕುರಿತು ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಈ ವಿಚಾರದ ಬಗ್ಗೆ ಸತತ ಟೀಕೆಗಳಿಂದ ಎಚ್ಚೆತ್ತುಕೊಂಡ ಐಸಿಸಿ ಅಂಪೈರ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಈ ಪ್ರಕರಣದಿಂದ ಜಾರಿಕೊಂಡಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಐಸಿಸಿ ವಕ್ತಾರರು, ಆನ್ ಫೀಲ್ಡ್ ಅಂಪೈರ್ ಗಳ ತೀರ್ಮಾನದ ಕುರಿತು ಮಾತನಾಡುವುದು ಐಸಿಸಿ ನಿಯಮಗಳಿಗೇ ವಿರುದ್ಧವಾದದು ಎಂದು ಹೇಳುವ ಮೂಲಕ ಅಂಪೈರ್ ತೀರ್ಮಾನಕ್ಕೆ ಪರೋಕ್ಷ ಬೆಂಬಲ ನೀಡಿದ್ದಾರೆ. ಅಲ್ಲದೆ, ಆನ್ ಫೀಲ್ಚ್ ಅಂಪೈರ್ ಗಳು ಪಂದ್ಯದ ಆಯಾ ಪರಿಸ್ಥಿತಿಗೆ ಅನುಗುಣವಾಗಿ ಐಸಿಸಿ ನಿಯಮಾವಳಿಗೆ ಅನುಸಾರವಾಗಿ ಯಾವುದೇ ತೀರ್ಮಾನ ಕೈಗೊಳ್ಳಲು ಸ್ವತಂತ್ರರು. ಅವರ ತೀರ್ಮಾನದ ವಿರುದ್ಧ ಅಥವಾ ಪರವಾಗಿ ಸಾರ್ವಜನಿಕವಾಗಿ ಮಾತನಾಡಬಾರದು. ಇದು ಐಸಿಸಿ ನಿಯಮ ಎಂದು ಹೇಳಿದ್ದಾರೆ.

ಏನಿದು ವಿವಾದ:
ಗುಪ್ಟಿಲ್ ಚೆಂಡನ್ನು ಎಸೆಯುವ ವೇಳೆ ಸ್ಟೋಕ್ಸ್ ಹಾಗೂ ಆದಿಲ್ ರಶೀದ್ ಒಬ್ಬರನ್ನೊಬ್ಬರನ್ನು ದಾಟಿರಲಿಲ್ಲ. ಎರಡನೇ ರನ್ ಪೂರ್ಣಗೊಳಿಸುವ ಸಂದರ್ಭದಲ್ಲಿ ಬಾಲ್ ಬ್ಯಾಟಿಗೆ ಬಡಿದ ಕಾರಣ ಚೆಂಡು ಬೌಂಡರಿಗೆ ಹೋಗಿದೆ. ಈ ಕಾರಣಕ್ಕೆ ಎರಡನೇಯ ರನ್ ಪರಿಗಣಿಸಬಾರದು. ಆದರೆ ಬೌಂಡರಿ ಜೊತೆಗೆ 2 ರನ್ ನೀಡಿದ ಪರಿಣಾಮ ಪಂದ್ಯ ಟೈ ಆಗಿದೆ. 5 ರನ್ ಮಾತ್ರ ನೀಡಿದ್ದರೆ ನ್ಯೂಜಿಲೆಂಡ್ ಜಯಗಳಿಸುತಿತ್ತು ಎಂದು ಕ್ರಿಕೆಟ್ ಅಭಿಮಾನಿಗಳು ವಾದಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top