fbpx
ಸಮಾಚಾರ

ಇನ್ಮುಂದೆ ಕನ್ನಡ ಸೇರಿ ಪ್ರಾದೇಶಿಕ ಭಾಷೆಗಳಲ್ಲಿಯೂ ಸುಪ್ರೀಂ ತೀರ್ಪು ಲಭ್ಯ

ಇನ್ನು ಮುಂದೆ ಸುಪ್ರೀಂ ಕೋರ್ಟ್ ತೀರ್ಪಿನ ಸಂಪೂರ್ಣ ಪ್ರತಿ ಕನ್ನಡ ಭಾಷೆ ಸೇರಿದಂತೆ ಪ್ರಮುಖ ಪ್ರಾದೇಶಿಕ ಭಾಷೆಗಳಲ್ಲೂ ಲಭ್ಯವಾಗಲಿದೆ. ಭಾರತದ ಆರು ಪ್ರಾದೇಶಿಕ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದ್ದು, ಕನ್ನಡದ ಜೊತೆ ತೆಲುಗು, ಹಿಂದಿ, ಅಸ್ಸಾಮಿ, ಮರಾಠಿ, ಓಡಿಯಾ ಭಾಷೆಗಳಲ್ಲಿ ತೀರ್ಪು ಲಭ್ಯವಾಗಲಿದೆ.

ಕನ್ನಡ ಸೇರಿದಂತೆ ದೇಶದ 9 ಸ್ಥಳೀಯ ಭಾಷೆಗಳಲ್ಲಿ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಪ್ರಕಟಿಸುವ ಯೋಜನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಬುಧವಾರ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಕೋವಿಂದ್‌ ಅವರು, ‘ಸುಪ್ರೀಂಕೋರ್ಟ್‌ನ ಮುಖ್ಯವಾದ 100 ತೀರ್ಪುಗಳು ಇತರೆ ಭಾಷೆಗಳಿಗೆ ತರ್ಜುಮೆಯಾಗಿದ್ದಕ್ಕೆ ಅತೀವ ಸಂತೋಷವಾಗಿದೆ’ ಎಂದು ಹರ್ಷಿಸಿದರು.

 

 

ದೇಶದ ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳನ್ನು ಕನ್ನಡ , ತೆಲುಗು ಸೇರಿದಂತೆ ದೇಶದ ಐದು ಪ್ರಮುಖ ಪ್ರಾದೇಶಿಕ ಭಾಷೆಗಳಿಗೆ ಖಟ್ಲೆದಾರರಿಗೆ ಆನುಕೂಲವಾಗಲಿ ಎಂಬ ದೃಷ್ಟಿಯಿಂದ ಭಾಷಾಂತರಗೊಳಿಸಿ ಪ್ರಕಟಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸೂಚಿಸಿದ್ದರು.

ನ್ಯಾಯಾಲಯದ ತೀರ್ಪುಗಳನ್ನು ಪ್ರಾದೇಶಿಕ ಭಾಷೆಯಲ್ಲಿ ಭಾಷಾಂತರಗೊಳಿಸಿ ಪ್ರಕಟಿಸಿದಾಗ ಕಾನೂನಿನ ಜಟಿಲ ಅಂಶಗಳನ್ನು ಸ್ಪಷ್ಟವಾಗಿ ಆರ್ಥಮಾಡಿಕೊಳ್ಳಲು ಕಕ್ಷಿದಾರರಿಗೆ ಸಾಧ್ಯವಾಗಲಿದೆ. ಈ ಉಪಕ್ರಮ ನ್ಯಾಯಾಂಗದಲ್ಲಿ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ..

 

ಅಂದಹಾಗೆ ಇಷ್ಟು ದಿನ ತೀರ್ಪುಗಳು ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಾಗುತ್ತಿತ್ತು. ಇದರಿಂದ ಪ್ರಾದೇಶಿಕ ಭಾಷೆಗಳನ್ನು ಮಾತ್ರ ಬಲ್ಲ ಜನರಿಗೆ ತೀರ್ಪನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿತ್ತು. ಈಗ ಆಯಾ ಪ್ರಾದೇಶಿಕ ಭಾಷೆಗಳಲ್ಲೂ ಸುಪ್ರೀಂ ತೀರ್ಪು ಬರುವುದರಿಂದ ಇಂಗ್ಲಿಷ್ ಬಾರದ ಜನರಿಗೆ ಅನುಕೂಲವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top