fbpx
ಸಮಾಚಾರ

ಕನ್ನಡಿಗರ ಪರವಾಗಿ ಖಾಸಗಿ ಮಸೂದೆಯನ್ನು ಪ್ರಸ್ತಾಪಿಸಲು ಮುಂದಾದ ಸಂಸದ ಜಿಸಿ ಚಂದ್ರಶೇಖರ್.

ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ಕ್ಷಣದಿಂದಲೂ ಒಂದರ ಹಿಂದೊಂದು ಕನ್ನಡ ಪರ ಕೆಲಸಗಳನ್ನು ಕೈಗೊಳ್ಳುತ್ತಿರುವ ಸಂಸದ ಜಿಸಿ ಚಂದ್ರಶೇಖರ್ ಅವರು ಮತ್ತೊಮ್ಮೆ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.. ಕನ್ನಡಿಗರಿಗಾಗಿ ಖಾಸಗಿ ಮಸೂದೆಯನ್ನು ಜಾರಿಗೆ ತರಲು ಸಂಸತ್ ನಲ್ಲಿ ಧ್ವನಿಯೆತ್ತುವುದಾಗಿ ಹೇಳಿದ್ದಾರೆ..

 

 

ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿರುವ ಸಂಸದರು “ಕನ್ನಡಿಗರ ಪರವಾಗಿ ಖಾಸಗಿ ಮಸೂದೆಯನ್ನು ಪ್ರಸ್ತಾಪಿಸಲು ಯೋಚಿಸುತ್ತಿದ್ದೇನೆ. ಇದು ಕೇವಲ ಹಿಂದಿ ಹೇರಿಕೆಯ ವಿರೋಧವಷ್ಟೇ ಅಲ್ಲ, ವಿವಿಧ ಭಾಷೆಗಳನ್ನು ಮಾತನಾಡುವ ಭಾರತದಾದ್ಯಂತ ಇರುವ ಪ್ರಾದೇಶಿಕ ಜನರಿಗೆ ಸಮಾನ ಅವಕಾಶಗಳನ್ನು ಖಾತರಿಪಡಿಸುತ್ತದೆ.” ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಂಸದ ಯೋಚನೆಯನ್ನು ನೀವು ಬೆಂಬಲಿಸಿದರೆ ದಯವಿಟ್ಟು ಸಲಹೆ ನೀಡುವಂತೆಯೂ ಹೇಳಿಕೊಂಡಿದ್ದಾರೆ.

ಈ ಬಗ್ಗೆ ನಿಮ್ಮ ಆಲೋಚನೆಗಳನ್ನು ಜಿಸಿ ಚಂದ್ರಶೇಖರ್ ಅವರ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಬಹುದಾಗಿದೆ.

ಸಂಸದ ಜಿಸಿ ಚಂದ್ರಶೇಖರ್ ಅವ್ರ ಕನ್ನಡ ಮತ್ತು ಕನ್ನಡಿಗರ ಪರ ಕೆಲಸಗಳು.
1.ಕರ್ನಾಟಕದ ಎಲ್ಲಾ ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯ ಕನ್ನಡ ನಾಮಫಲಕ ಹಾಕುವ ಬಗ್ಗೆ ಸುತ್ತೋಲೆ ಹೊರಡಿಸುವಂತೆ ಉಪಮುಖ್ಯಮಂತ್ರಿಗಳಿಗೆ ಮನವಿ.
2. ನಮ್ಮ ಮೆಟ್ರೋದಲ್ಲಿ ಕನ್ನಡ ಜ್ಞಾನವುಳ್ಳವರಿಗೆ ಮಾತ್ರ ಉದ್ಯೋಗ ನೀಡಬೇಕೆಂದು ‘BMRCL’ ಮಹಾ ನಿರ್ದೇಶಕರಿಗೆ ಪತ್ರಬರೆದಿದ್ದಾರೆ.
3. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಗ್ಗಂಟಾಗಿರುವ #IBPSMosaದ ಬಗ್ಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲೆ ಇದನ್ನು ಮಂಡಿಸಿ ಕರ್ನಾಟಕದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ. ಎಂಬ ಬರವಸೆಯನ್ನು ಚಂದ್ರ ಶೇಖರ್ ನೀಡಿದ್ದಾರೆ.
5. ಕರ್ನಾಟಕ ಸರ್ಕಾರದ ಎಲ್ಲಾ ಯೋಜನೆಗಳಿಗೆ ಕನ್ನಡ ಹೆಸರುಗಳನ್ನೇ ಇಡಬೇಕೆಂದು ಮಾನ್ಯ ಉಪಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಿದ್ದರು. ಅದರ ಪರಿಣಾಮವಾಗಿ ‘ರೋಶಿನಿ’ ಎಂಬ ಹೆಸರಿದ್ದ ಯೋಜನೆಗೆ ಈಗ ‘ಬೆಳಕು’ ಎಂಬ ಕನ್ನಡ ಪದದ ಹೆಸರನ್ನು ಇಡಲಾಗಿದೆ.
6. ಕರ್ನಾಟದಲ್ಲಿ ಮುಂದೆ ಸೃಷ್ಟಿಯಾಗುವ ಎಲ್ಲಾ ಉದ್ಯೋಗಳಿಗೂ ಕನ್ನಡಿಗರಿಗೆ ಆದ್ಯತೆ ಮೇಲೆ ಕೆಲಸ ನೀಡಬೇಕೆಂದು ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವ ಭರವಸೆ ನೀಡಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top