fbpx
ಸಮಾಚಾರ

ಎರಡು ವಾರದಲ್ಲಿ ನಾಲ್ಕು ಚಿನ್ನದ ಪದಕ ಗೆದ್ದ ಹಿಮಾ ದಾಸ್.

ಭಾರತದ ಯುವ ಓಟಗಾರ್ತಿ ಹಿಮಾ ದಾಸ್ ಮತ್ತೆ ದಾಖಲೆ ಬರೆದಿದ್ದಾರೆ. 19 ವರ್ಷದ ಹಿಮಾ ದಾಸ್ ಎರಡು ವಾರದಲ್ಲಿ 4ನೇ ಚಿನ್ನದ ಪದಕ ಗೆದ್ದಿದ್ದಾರೆ. ಜೆಕ್​ ಗಣರಾಜ್ಯದಲ್ಲಿ ನಡೆಯುತ್ತಿರುವ ಟಬೋರ್​ ಅಥ್ಲೆಟಿಕ್ಸ್​​​ ಮೀಟ್​ನಲ್ಲಿ 200 ಮೀ. ವಿಭಾಗದಲ್ಲಿ ಹಿಮಾ ದಾಸ್​ ಚಿನ್ನದ ಪದಕ ಜಯಿಸಿದ್ದಾರೆ. 23.25 ಸೆಕೆಂಡ್​ಗಳಲ್ಲಿ ರೇಸ್​ ಪೂರ್ಣಗೊಳಿಸಿದ ಹಿಮಾ ದಾಸ್​ ಹಳದಿ ಲೋಹಕ್ಕೆ ಮುತ್ತಿಕ್ಕಿದರು.

ದಾಸ್ ಜುಲೈ 2ರಂದು ಯುರೋಪ್‌ನಲ್ಲಿ ಮೊದಲ ಸ್ಪರ್ಧಾತ್ಮಕ ರೇಸ್ ಓಡಿದ್ದರು. ಇದರಲ್ಲಿ ಹಿಮಾಗೆ ಚಿನ್ನ ಲಭಿಸಿತ್ತು. ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಪೋಲೆಂಡ್‌ನಲ್ಲಿ ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್‌ ಪ್ರಿಕ್ಸ್, ಪೋಲೆಂಡ್‌ನಲ್ಲಿ ಕುಂಟೋ ಅಥ್ಲೆಟಿಕ್ಸ್ ಮೀಟ್, ಟ್ಯಾಬರ್ ಅಥ್ಲೆಟಿಕ್ಸ್ ಮೀಟ್ ಹೀಗೆ ಒಟ್ಟು 4 ಕ್ರೀಡಾಕೂಟಗಳಲ್ಲಿ ಹಿಮಾಗೆ ಬಂಗಾರ ದೊರೆತಿದೆ.

ಹಿಮಾ ಚಿನ್ನದ ಸಾಧನೆಗಳು:
ಜುಲೈ 2, ಪೋಝ್ನಾನ್‌ಅಥ್ಲೀಟ್ ಗ್ರ್ಯಾಂಡ್ ಪ್ರಿ (ಪೋಲೆಂಡ್), 200 ಮೀಟರ್, 23.65 ಸೆಕೆಂಡು
ಜುಲೈ 8, ಕುಂಟೊ ಅಥ್ಲೆಟಿಕ್‌ ಮೀಟ್ (ಪೋಲೆಂಡ್), 200 ಮೀಟರ್, 23.65 ಸೆಕೆಂಡು
ಜುಲೈ 13, ಕ್ಲಾಡ್ನೊ ಅಥ್ಲೀಟಿಕ್ ಮೀಟ್, ಜೆಕ್ ಗಣರಾಜ್ಯ, 200 ಮೀಟರ್, 23.43 ಸೆಕೆಂಡು
ಜುಲೈ 18, ಟ್ಯಾಬರ್ ಅಥ್ಲೀಟ್ ಮೀಟ್‌, ಜೆಕ್ ಗಣರಾಜ್ಯ, 200 ಮೀಟರ್, 23.25 ಸೆಕೆಂಡು

ಹಿಮಾ ದಾಸ್ ಕಳೆದ ಕೆಲ ತಿಂಗಳಿನಿಂದ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದರು. ಹೀಗಾಗಿ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನ ಎನ್ನಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಟ್ರ್ಯಾಕ್​ಗೆ ಮರಳಿದ ಹಿಮಾ ದಾಸ್ ಇದೀಗ ಯಶಸ್ವಿಯಾಗಿ ಎರಡನೇ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top