fbpx
ಸಮಾಚಾರ

ವಿಶ್ವಾಸಮತ ಪ್ರಕ್ರಿಯೆ ಇಂದೇ ಪೂರ್ಣಗೊಳಿಸಿ: ಸ್ಪೀಕರ್ ಗೆ ರಾಜ್ಯಪಾಲರಿಂದ ಖಡಕ್ ಸಂದೇಶ.

ಇಂದಿನ ಅಧಿವೇಶನದಲ್ಲಿ ಬಹುಮತ ಸಾಬೀತಿನ ಮೇಲೆ ನಿರಂತರವಾಗಿ ಚರ್ಚೆ ನಡೆಯುತ್ತಿದೆ. ಆದರೆ, ಸರ್ಕಾರ ಬಹಮತ ಸಾಬೀತಿಗೆ ವಿಳಂಬನೀತಿ ಅನುಸರಿಸುತ್ತಿದೆ ಎಂದು ಬಿಜೆಪಿಯ ಟೀಕೆಯ ನಡುವೆ ಸ್ಪೀಕರ್​ ರಮೇಶ್ ಕುಮಾರ್ ಅವರಿಗೆ ಸಂದೇಶ ಕಳಿಸಿರುವ ರಾಜ್ಯಪಾಲ ವಜುಭಾಯ್ ವಾಲಾ ಆಡಳಿತ ಪಕ್ಷ ಇಂದೇ ಬಹುಮತ ಸಾಬೀತುಪಡಿಸಲಿ ಎಂದು ಅಧಿವೇಶನದ ಮಧ್ಯಪ್ರವೇಶಿಸಿ ಸಂದೇಶ ಕಳುಹಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ.

 

 

ಭೋಜನ ವಿರಾಮದ ನಂತರ ಪ್ರಾರಂಭವಾದ ಸದನದಲ್ಲಿ ರಾಜ್ಯಪಾಲರು ನನಗೆ ಇಂದೇ ಬಹುಮತ ಸಾಬೀತು ಪಡಿಸಲು ಸಂದೇಶ ಕಳಿಸಿದ್ದಾರೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ರಾಜ್ಯಪಾಲರು ಕಳಿಸಿರುವ ಸಂದೇಶಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದಾದ ನಂತರ ಸ್ಪಷ್ಟನೆ ನೀಡಿರುವ ಸ್ಪೀಕರ್ ರಮೇಶ್ ಕುಮಾರ್ ತಮಗೆ ರಾಜ್ಯಪಾಲರು ಸಂದೇಶವನ್ನು ಮಾತ್ರ ನೀಡಿದ್ದಾರೆ ಹೊರತು ನಿರ್ದೇಶನವಲ್ಲ ಎಂದು ತಿಳಿಸಿದರು.

ರಾಜ್ಯಪಾಲರ ಸಂದೇಶಕ್ಕೆ ಕಾಂಗ್ರೆಸ್​ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸದನದಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವಿನ ಗದ್ದಲಕ್ಕೆ ಕಾರಣವಾಯಿತು. ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಅವರು ತಡರಾತ್ರಿ 12 ಗಂಟೆಯಾದರೂ ಪರವಾಗಿಲ್ಲ ಇಂದೇ ವಿಶ್ವಾಸಮತ ಯಾಚನೆಯನ್ನು ಪೂರ್ಣಗೊಳಿಸಿ ಎಂದು ಪಟ್ಟು ಹಿಡಿದಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top