fbpx
ಸಮಾಚಾರ

ಸುಪ್ರೀಂ ತೀರ್ಪು: ಅತೃಪ್ತರಿಗೆ ಬಿಗ್ ರಿಲೀಫ್, ಸರ್ಕಾರಕ್ಕೆ ಸೋಲು?

ಅಧಿವೇಶನದ ಕಲಾಪದಲ್ಲಿ ಪಾಲ್ಗೊಳ್ಳುವುದು ಬಿಡುವುದು ಆಯಾ ಶಾಸಕರ ವಿವೇಚನೆಗೆ ಬಿಟ್ಟ ವಿಚಾರ, ಹೀಗಾಗಿ ಅವರನ್ನು ಅಧಿವೇಶನಕ್ಕೆ ಪಾಲ್ಗೊಳ್ಳಿ ಎಂದು ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳುವ ಮೂಲಕ ಸುಪ್ರೀಂ ರೆಬೆಲ್ ಶಾಸಕರಿಗೆ ಬಿಗ್ ರಿಲೀಫ್ ನೀಡಿದೆ.

ಗುರುವಾರ ರಾಜ್ಯದ ವಿಧಾನಮಂಡಲ ಅಧಿವೇಶನದಲ್ಲಿ ಸಿಎಂ ಕುಮಾರಸ್ವಾಮಿ ವಿಶ್ವಾಸ ಮತಯಾಚಿಸಲಿದ್ದಾರೆ. ಹೀಗಾಗಿ ಈ ಅಧಿವೇಶನದಲ್ಲಿ ಎಲ್ಲಾ ರೆಬೆಲ್ ಶಾಸಕರು ಭಾಗವಹಿಸಬೇಕು ಹಾಗೂ ಸರ್ಕಾರದ ಪರ ಮತ ಚಲಾಯಿಸಬೇಕು ಎಂದು ಮೈತ್ರಿ ಪಕ್ಷಗಳು ವಿಪ್ ಜಾರಿಗೊಳಿಸಿದ್ದವು.

ಆದರೆ, ಈ ಕುರಿತು ಸ್ಪಷ್ಟ ತೀರ್ಪು ನೀಡಿರುವ ಸುಪ್ರೀಂ, “ಅಧಿವೇಶನದ ಕಲಾಪದಲ್ಲಿ ಪಾಲ್ಗೊಳ್ಳುವುದು ಬಿಡುವುದು ಆಯಾ ಶಾಸಕರ ವಿವೇಚನೆಗೆ ಬಿಟ್ಟ ವಿಚಾರ, ಹೀಗಾಗಿ ಅವರನ್ನು ಅಧಿವೇಶನಕ್ಕೆ ಪಾಲ್ಗೊಳ್ಳಿ ಎಂದು ಒತ್ತಡ ಹೇರುವ ಹಕ್ಕು ಯಾರಿಗೂ ಇಲ್ಲ” ಎಂದು ಹೇಳುವ ಮೂಲಕ ರೆಬೆಲ್ ಶಾಸಕರಿಗೆ ಬಿಗ್ ರಿಲೀಫ್ ನೀಡಿದೆ. ಹೀಗಾಗಿ ರೆಬೆಲ್​ಗಳು ನಾಳೆ ವಿಶ್ವಾಸಮತದಲ್ಲಿ ಪಾಲ್ಗೊಳ್ಳದಿದ್ದರೂ ವಿಪ್ ಕುಣಿಕೆಯಿಂದ ಬಚಾವಾಗಲಿದ್ದಾರೆ.

ಸುಪ್ರೀಂ ನ ಈ ತೀರ್ಪಿನ ಮೂಲಕ ನಾಳೆ ಸರ್ಕಾರ ಬೀಳುವುದು ಬಹುತೇಕ ಖಚಿತ ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ. ಒಂದು ವೇಳೆ ಅತೃಪ್ತ ಶಾಸಕರು ವಿಶ್ವಾಸಮತ ಯಾಚನೆ ವೇಳೆ ಹಾಜರಾಗದಿದ್ದರೆ ಸರ್ಕಾರ ಅಲ್ಪಮತಕ್ಕೆ ಕುಸಿದು ಪತನಗೊಳ್ಳಲಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ 5 ವರ್ಷದ ಅವಧಿ ಪೂರ್ಣಗೊಳಿಸುವ ಮೊದಲೇ ಬೀಳಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top