fbpx
ಸಮಾಚಾರ

ಎಣ್ಣೆ ಏಟಲ್ಲಿ ಕಿಚ್ಚನಿಗೆ ಕೆಳಮಟ್ಟದ ಪದದಿಂದ ಬೈದ ಶಶಿ- ಬೈದವನಿಗೆ ಸುದೀಪ್ ಹೇಳಿದ್ದೇನು ಗೊತ್ತಾ?

ಇತ್ತೀಚೆಗೆ ಬಿಗ್‍ಬಾಸ್‍ ಸೀಸನ್ 6ರ ಸ್ಪರ್ಧಿಸಿದ್ದ ನಯನಾ ಮನೆಯಲ್ಲೊಂದು ಪಾರ್ಟಿ ಮಾಡಿದ್ದರಂತೆ. ಅಲ್ಲಿ ಜೀವಿತಾ, ರಕ್ಷಿತಾ, ನವೀನ್ ಸಜ್ಜು ಸೇರಿದಂತೆ ಸಾಕಷ್ಟು ಜನ ಸೇರಿದ್ದರಂತೆ. ಈ ವೇಳೆ ಕುಡಿದು ಚಿತ್ತಾಗಿದ್ದ ಶಶಿ ನಟ ಸುದೀಪ್ ಅವರನ್ನು ತೀರಾ ಕೆಳಮಟ್ಟದ ಪದ ಉಪಯೋಗಿಸಿ ಮಾತಾಡಿಬಿಟ್ಟಿದ್ದಾನೆ. ಅದು ಹೇಗೋ ಅಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದವರ ಮೊಬೈಲಿನಲ್ಲಿ ರೆಕಾರ್ಡ್ ಆಗಿ ಹೋಗಿದೆ. ನಂತರ ಶಶಿ ಬೈದ್ದಿರೋ ವಿಡಿಯೋ ಸುದೀಪ್ ಅವರಿಗೆ ರವಾನೆಯಾಗಿದೆ.

ಶಶಿ ಮಾತನಾಡಿದ ವಿಡಿಯೋ ನೋಡಿದ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಆ ವಿಡಿಯೋವನ್ನು ಎಲ್ಲಿಯೂ ಬಹಿರಂಗ ಆಗದೆ ಇರುವ ಹಾಗೆ ನೋಡಿಕೊಂಡಿದ್ದಾರೆ. ಸುದೀಪ್ ಗೆ ವಿಷಯ ತಿಳಿದಿದೆ ಎಂದಾಗ ತಕ್ಷಣ ಕಿಚ್ಚನಿಗೆ ಕರೆ ಮಾಡಿ `ಹಾಗಲ್ಲ ಹೀಗಲ್ಲ’ ಅಂತಾ ತಿಪ್ಪೆ ಸಾರಿಸುವ ಪ್ರಯತ್ನ ಮಾಡಿದ್ದಾನೆ. ಶಶಿಯ ಮಾತಿಗೆ ಸೊಪ್ಪು ಹಾಕದ ಸುದೀಪ್ “ನಾನು ಇವತ್ತು ತುಂಬಾ ಒಳ್ಳೇ ಮೂಡಲ್ಲಿ ಇದ್ದೇನೆ. ಬದುಕ್ಕೋ ಹೋಗು” ಎಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ.

ಈ ವಿಷಯ ಎಲ್ಲೆಡೆ ಸುದ್ದಿಯಾದರೂ, ಈ ಬಗ್ಗೆ ಸುದೀಪ್ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ಇತ್ತೀಚಿಗೆ ಖಾಸಗಿ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ವಿಚಾರವಾಗಿ ಸುದೀಪ್ ಮಾತನಾಡಿದ್ದಾರೆ.. ‘ಅವರು ಚೆನ್ನಾಗಿ ಇರಬೇಕು.. ಬಾಳಿ ಬದುಕಬೇಕು. ಎಂಬ ಕಾರಣಕ್ಕೆ ಈ ವಿಷಯವನ್ನು ದೊಡ್ಡದು ಮಾಡಲಿಲ್ಲ, ಏಕೆ ಸುಮ್ಮನೆ ಇಂತಹ ಸಂಗತಿಗಳನ್ನು ದೊಡ್ಡದು ಮಾಡಬೇಕು?” ಎಂದು ಸುದೀಪ್ ಪ್ರಶ್ನೆ ಮಾಡಿದ್ದಾರೆ.

”ನಾಯಿ ಕಾಲೆತ್ತಿ ಕಲ್ಲಿನ ಮೇಲೆ ಉಚ್ಚೆ ಮಾಡಿದರೆ, ಕಲ್ಲಿನ ತೂಕ ಕಡಿಮೆ ಆಗುವುದಿಲ್ಲ. ನಾಯಿ ತನ್ನ ಬುದ್ದಿ ತೋರಿಸುತ್ತದೆ. ಕಲ್ಲು ಒಣಗಿದ ಮೇಲೆ ತನ್ನ ವ್ಯಕ್ತಿತ್ವ ತೋರಿಸುತ್ತದೆ. ಇಂಥಾ ವಿಚಾರಗಳು ದೊಡ್ಡದಾದರೆ ಅವರಿಗೆ ಅಪಾಯ! ಯಾಕೆಂದರೆ ನಮ್ಮನ್ನ ಪ್ರೀತಿಸುವ ಅಭಿಮಾನಿಗಳು ಸುಮ್ಮನಿರುತ್ತಿರಲಿಲ್ಲ, ಹಾಗಾಗಿ ಈ ವಿಚಾರವನ್ನು ದೊಡ್ಡದು ಮಾಡಲಿಲ್ಲ” ಎಂದು ಮಾತಿನಲ್ಲೇ ಸುದೀಪ್ ಶಶಿಗೆ ಏಟುಕೊಟ್ಟಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top