fbpx
ಸಮಾಚಾರ

ಸೆಮಿಫೈನಲ್ ನಲ್ಲಿ ಮುಗ್ಗರಿಸಿದ ಟೀಂ ಇಂಡಿಯಾ ಸೇರಿದಂತೆ 10 ತಂಡ ಪಡೆದ ಪ್ರಶಸ್ತಿ ಮೊತ್ತ ಇಲ್ಲಿದೆ

ಐಸಿಸಿ ವಿಶ್ವಕಪ್ ಮುಕ್ತಾಯವಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಎಲ್ಲ 10 ತಂಡಗಳೂ ತಮ್ಮ ತಮ್ಮ ಮುಂದಿನ ಕ್ರಿಕೆಟ್ ಸರಣಿಗಾಗಿ ತವರಿನತ್ತ ಮುಖ ಮಾಡಿವೆ. ಆದರೆ ಟೂರ್ನಿಯಲ್ಲಿ ಪಾಲ್ಗೊಂಡ ತಂಡಗಳು ಎಷ್ಟೆಷ್ಟು ಹಣ ಪಡೆದವು ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಟ್ರೋಫಿ ಗೆದ್ದ ಇಂಗ್ಲೆಂಡ್ ತಂಡ ಬರೋಬ್ಬರಿ 29 ಕೋಟಿ ರೂಪಾಯಿ ಪ್ರಶಸ್ತಿ ಮೊತ್ತ ಪಡೆದಿದೆ. ರನ್ನರ್ ಅಪ್ ಪ್ರಶಸ್ತಿ ಗೆದ್ದ ನ್ಯೂಜಿಲೆಂಡ್ ತಂಡ 15 ಕೋಟಿ ರೂಪಾಯಿ ಮೊತ್ತವನ್ನು ಬಹುಮಾನ ರೂಪದಲ್ಲಿ ಪಡೆದಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಮುಗ್ಗರಿಸಿ ಟೂರ್ನಿಯಿಂದ ಹೊರಬಿದ್ದ ಟೀಂ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಲಾ 7 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ.

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡ 10 ತಂಡಗಳ ಪ್ರಶಸ್ತಿ ಮೊತ್ತ:
ಚಾಂಪಿಯನ್- ಇಂಗ್ಲೆಂಡ್: 29,05,82,040 ರೂ
ರನ್ನರ್ ಅಪ್-ನ್ಯೂಜಿಲೆಂಡ್: 7,40,16,180 ರೂ
ಸೆಮಿಫೈನಲ್- ಟೀಂ ಇಂಡಿಯಾ:7,40,16,180 ರೂ
ಸೆಮಿಫೈನಲ್- ಆಸ್ಟ್ರೇಲಿಯಾ: 7,40,16,180 ರೂ
5ನೇ ಸ್ಥಾನ- ಪಾಕಿಸ್ತಾನ: 2,05,60,050 ರೂ
6ನೇ ಸ್ಥಾನ- ಶ್ರೀಲಂಕಾ: 1,50,77,370 ರೂ
7ನೇ ಸ್ಥಾನ- ಸೌತ್ ಆಫ್ರಿಕಾ: 1,50,77,370 ರೂ
8ನೇ ಸ್ಥಾನ – ಬಾಂಗ್ಲಾದೇಶ: 1,50,77,370 ರೂ
9ನೇ ಸ್ಥಾನ- ವೆಸ್ಟ್ ಇಂಡೀಸ್: 1,23,36,030 ರೂ
10ನೇ ಸ್ಥಾನ- ಆಫ್ಘಾನಿಸ್ತಾನ: 68,53,350 ರೂ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top