fbpx
ಸಮಾಚಾರ

ಪುನೀತ್ ‘ಯುವರತ್ನ’ ಚಿತ್ರಕ್ಕೆ ಹೊಸ ಹೀರೋನ ಎಂಟ್ರಿ! ಯಾರದು ಗೊತ್ತಾ?

ರಾಜಕುಮಾರದಂತಹ ಪರಿಪೂರ್ಣ ಹಿಟ್ ಸಿನಿಮಾವನ್ನು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಪುನೀತ್ ರಾಜಕುಮಾರ್ ಮತ್ತು ಸಂತೋಷ್ ಆನಂದರಾಮ್ ಅವರ ಕಾಂಬಿನೇಷನ್ ನಲ್ಲಿ ‘ಯುವರತ್ನ’ ಎಂಬ ಮತ್ತೊಂದು ಕನ್ನಡ ಚಿತ್ರ ಮೂಡಿಬರುತ್ತಿದ್ದು ಈಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳು ಬೆಳೆದುಕೊಳ್ಳುತ್ತಿವೆ.

 

 

ಈ ಚಿತ್ರಕ್ಕೆ ಹೊಸ ಹೀರೋ ಒಬ್ಬನ ಎಂಟ್ರಿ ಆಗಿದೆ! ಅಷ್ಟಕ್ಕೂ ಯಾರು ಆ ಹೀರೋ? ದಿಗಂತ್​ ಮಂಚಾಲೆ. ಕಳೆದ ವರ್ಷದ ಆರಂಭದಲ್ಲಿ ದಿಗಂತ್​ ನಟನೆಯ ‘ಫಾರ್ಚುನರ್​’ ಸಿನಿಮಾ ತೆರೆಕಂಡಿತ್ತು. ನಂತರ ಅವರ ಯಾವ ಸಿನಿಮಾಗಳೂ ತೆರೆಗೆ ಬಂದಿಲ್ಲ. ಈಗ ದಿಗಂತ್​ ಸೈಲೆಂಟ್​ ಆಗಿ ‘ಯುವರತ್ನ’ ಚಿತ್ರ ತಂಡ ಸೇರಿಕೊಂಡಿದ್ದಾರೆ. ಈ ಮೂಲಕ ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇದು ಸಹಜವಾಗಿಯೇ ದಿಗಂತ್​ ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.

ಇತ್ತೀಚಿಗಷ್ಟೆ ‘ಯುವರತ್ನ’ ಚಿತ್ರಕ್ಕೆ ಪ್ರಕಾಶ್ ರೈ ಎಂಟ್ರಿ ಕೊಟ್ಟಿದ್ದರು. ಇನ್ನು ಸಂಗೀತ ನಿರ್ದೇಶಕರಾಗಿ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ತಮನ್ ಕೂಡ ಎಂಟ್ರಿಯಾಗಿದ್ದಾರೆ. ಪುನೀತ್ ಅಭಿನಯದ ಪವರ್ ಸ್ಟಾರ್, ಚಕ್ರವ್ಯೂಹ ಸಿನಿಮಾಗಳಿಗೆ ತಮನ್ ಸಂಗೀತ ನಿರ್ದೇಶನ ಮಾಡಿದ್ದರು. ಈಗ ಮೂರನೆ ಭಾರಿ ಅಪ್ಪು ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ಅಂದಹಾಗೆ ರಾಜಕುಮಾರ ಚಿತ್ರವನ್ನು ನಿರ್ಮಾಣ ಮಾಡಿದ್ದ ಹೊಂಬಾಳೆ ಪ್ರೊಡಕ್ಷನ್ ಅವರ ವಿಜಯ್ ಕಿರಂಗದೂರು ಅವರೇ ಮತ್ತೆ ಪುನೀತ್ ಮತ್ತು ಸಂತೋಷ್ ಜೋಡಿಯ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ದೊಡ್ಡ ಬಜೆಟ್’ನಲ್ಲಿ ಚಿತ್ರ ನಿರ್ಮಾಣವಾಗಲಿದ್ದು ಚಿತ್ರದಲ್ಲಿ ಡಾಲಿ ಧನಂಜಯ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top