fbpx
ಸಮಾಚಾರ

ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್ ಆಗ್ತಿದೆ ‘ಕಣ್ಣು ಮಣಿಯೇ.. ಕಣ್ಣ ಹೊಡಿಯೇ’ ಹಾಡು.

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾದ ಕಣ್ಣ ಮಣಿಯೇ… ಕಣ್ಣು ಹೊಡಿಯೇ ಎನ್ನುವ ರೊಮ್ಯಾಂಟಿಕ್ ಸಾಂಗ್ ವೊಂದು ರಿಲೀಸ್ ಆಗಿದೆ. ಈ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದಾರೆ. ಇದು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಾಡಿಗೆ ಡಾ.ವಿ ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

 

 

 

ಅಂದಹಾಗೆ ಕೆಲದಿನಗಳ ಹಿಂದೆ ಲಹರಿ ಸಂಸ್ಥೆಯು ಅಭಿನಯ ಚಕ್ರವರ್ತಿ ಅಭಿನಯದ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಖರೀದಿಸಿ ಸದ್ದು ಮಾಡಿತ್ತು. ಇದೀಗ ‘ಪೈಲ್ವಾನ್’​ನ ಗಾನ ಬಜಾನಗೆ ವೇದಿಕೆ ಸಿದ್ದಪಡಿಸಲು ಚಿತ್ರತಂಡ ಮುಂದಾಗಿದೆ. ಚಿತ್ರದ ಹಾಡುಗಳನ್ನು ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆ ಮಾಡಲು ಕೃಷ್ಣ ಅ್ಯಂಡ್ ಟೀಂ ಪ್ಲ್ಯಾನ್​ ಮಾಡಿಕೊಂಡಿದೆಯಂತೆ. ಅಂದರೆ ಜುಲೈ 27 ರಂದು ‘ಪೈಲ್ವಾನ್’​ನ ಹಾಡುಗಳು ಲೋಕಾಪರ್ಣೆ ಆಗಲಿದೆ.

ಚಿತ್ರದುರ್ಗದಲ್ಲಿ “ಪೈಲ್ವಾನ್‌’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಇಷ್ಟು ದಿನ “ಪೈಲ್ವಾನ್‌’ ಚಿತ್ರದ ಹಾಡುಗಳು ಹೇಗಿರಲಿವೆ ಎಂಬ ಪ್ರಶ್ನೆಗೆ ಜುಲೈ 27 ರಂದು ಉತ್ತರ ಸಿಗಲಿದೆ. ಆಡಿಯೋ ಸಮಾರಂಭಕ್ಕೂ ಮುನ್ನವೇ ಒಂದೊಂದರಂತೆ ವಾರಕ್ಕೊಂದು ಹಾಡನ್ನು ಚಿತ್ರತಂಡ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top