fbpx
ಸಮಾಚಾರ

ರಕ್ಷಿತ್ ಜೊತೆಗಿನ ಬ್ರೇಕ್ಅಪ್ ರಶ್ಮಿಕಾಗೆ ಕೇಳಿದ್ದಕ್ಕೆ ಮಾಧ್ಯಮದವರ ಮೇಲೆ ವಿಜಯ್ ದೇವರಕೊಂಡ ಗರಂ!

ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೆಡ್ ಚಿತ್ರ ದಕ್ಷಿಣ ಭಾರತದ ನಾಲ್ಕೂ ಭಾಷೆಗಳಲ್ಲಿ ಏಕಕಾಲಕ್ಕೆ ಇದೇ ತಿಂಗಳ 26ಕ್ಕೆ ಬಿಡುಗಡೆಯಾಗುತ್ತಿದೆ. ಈ ಸಂಬಂಧ ಚಿತ್ರತಂಡ ಪ್ರಚಾರಕ್ಕಾಗಿ ಬೆಂಗಳೂರಿಗೆ ನಿನ್ನೆ ಆಗಮಿಸಿ ಚಿತ್ರದ ಬಗ್ಗೆ ಮಾಹಿತಿ ನೀಡಿತು. ಚಿತ್ರದ ನಾಯಕಿ ರಶ್ಮಿಕಾ ಮತ್ತು ನಾಯಕ ವಿಜಯ್ ಮಾಧ್ಯಮಗಳ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಸಹಜವಾದಿ ರಕ್ಷಿತ್ ಶೆಟ್ಟಿಯವರೊಂದಿಗೆ ಬ್ರೇಕಪ್ ವಿಚಾರವಾಗಿ ಪ್ರಶ್ನೆ ಎದುರಾಯಿತು.

ಗೀತ ಗೋವಿಂದಂ ಸಿನಿಮಾ ಬಳಿಕ ನಿಮ್ಮ ಮತ್ತು ರಕ್ಷಿತ್ ಶೆಟ್ಟಿ ಬ್ರೇಕಪ್ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಿದವು. ನೀವಿಬ್ಬರೂ ಹೆಚ್ಚಾಗಿ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ನಿಮ್ಮ ನಡುವೆ ಏನಾಯಿತು ಎಂಬ ಪ್ರಶ್ನೆಯನ್ನು ರಶ್ಮಿಕಾ ನಗುನಗುತ್ತಲೇ ಸ್ವೀಕರಿಸಿದರು. ಬಳಿಕ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಹೆಸರು ಕೇಳಿಬರುತ್ತಿದ್ದು ರಶ್ಮಿಕಾ ಬ್ರೇಕ್ ಅಪ್ ಗೆ ಇದೀಗ ವಿಜಯ್ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಈ ಪ್ರಶ್ನೆ ಕೇಳುತ್ತಿದ್ದಂತೆ ನಡುವೆ ಮಾತನಾಡಿದ ವಿಜಯ್ ದೇವರಕೊಂಡ, ನಿಮ್ಮ ಪ್ರಶ್ನೆ ಸರಿಯಾಗಿ ಅರ್ಥವಾಗಲಿಲ್ಲ. ಮುಖ್ಯವಾಗಿ ಇದು ಯಾರಿಗೂ ಸಂಬಂಧಿಸಿದ ವಿಷಯವಲ್ಲ. ವೈಯಕ್ತಿಕ ಪ್ರಶ್ನೆಗಳಿಗಿಂತ ಸಿನಿಮಾಗೆ ಸಂಬಂಧಿಸಿದಂತೆ ಕೇಳಿದರೆ ಚೆನ್ನಾಗಿರುತ್ತದೆ ಎಂದರು.

ನಿಮ್ಮ ಮತ್ತು ರಕ್ಷಿತ್ ಬಗ್ಗೆ ಕೇಳಿಬರುತ್ತಿರುವ ಗಾಸಿಪ್ ಬಗ್ಗೆ ಏನು ಹೇಳುತ್ತೀರಿ ಎಂದು ಮಾಧ್ಯಮದವರು ಮುಂದುವರಿದು ಕೇಳಿದಾಗ, ಇದು ನಿಮಗೆ ಕೇಳಿಬಂದ ಗಾಸಿಪ್ ಅಲ್ಲವೇ, ಹಾಗಾಗಿ ಇದು ಗಾಸಿಪ್, ಈ ವಿಷಯದಲ್ಲಿ ಯರು ಕೂಡ ಮುಂದೆ ಬಂದು ನೋಡಿ ಇದು ವಿಷಯ ಹೀಗೆ ಆಗಿದೆ ಎಂದು ಹೇಳಿಲ್ಲವಲ್ಲಾ, ಜನರು ಏನು ಹೇಳುತ್ತಾರೆ, ಅದನ್ನು ಹೇಳುತ್ತಾರೆ ಅಷ್ಟೆ ಎಂದರು ರಶ್ಮಿಕಾ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top